ತಿರುವನಂತಪುರ: ಪ್ರತಿಯೊಬ್ಬರಿಗೂ ಸರ್ಕಾರಿ ಉದ್ಯೋಗ ಬೇಕು ಎಂಬ ನಿಲುವು ಕೇರಳದಲ್ಲಿ ಮಾತ್ರ ಎಂದು ಹೈಕೋರ್ಟ್ ಗಮನಿಸಿದೆ. ರಾಜ್ಯದಲ್ಲಿ ಸರ್ಕಾರಿ ಆದಾಯದ ಶೇಕಡಾ 75 ರಷ್ಟು ಹಣವನ್ನು ಸಂಬಳ ಮತ್ತು ಇತರ ಸವಲತ್ತುಗಳಿಗಾಗಿ ಖರ್ಚು ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಇಂದು ಬೊಟ್ಟುಮಾಡಿದೆ. ಪಿಎಸ್‍ಸಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಇಂದು ಪರಿಗಣಿಸಿದ ಹೈಕೋರ್ಟ್ ಈ ಉಲ್ಲೇಖವನ್ನು ಮಾಡಿದೆ. ಅರ್ಜಿಯನ್ನು ನ್ಯಾಯಮೂರ್ತಿ ಅಲೆಕ್ಸಾಂಡರ್ ಥಾಮಸ್ ಮತ್ತು ನ್ಯಾಯಮೂರ್ತಿ ಎ ಬದ್ರುದ್ದೀನ್ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು.
ಸರ್ಕಾರದ ಆದಾಯದ ಮುಕ್ಕಾಲು ಭಾಗವನ್ನು ಸಂಬಳ ಮತ್ತು ಇತರ ಸವಲತ್ತುಗಳಿಗಾಗಿ ಖರ್ಚು ಮಾಡಲಾಗುತ್ತಿದೆ. ಕೇರಳದಲ್ಲಿ ಮಾತ್ರ ಎಲ್ಲರಿಗೂ ಸರ್ಕಾರಿ ಕೆಲಸ ಇರಬೇಕು ಎಂಬ ಮನೋಧರ್ಮ ಬಲವಾಗಿದೆ. ಯುವಕರ ಈ ಮನಸ್ಥಿತಿಯನ್ನು ಬದಲಾಯಿಸಬೇಕು ಎಂದೂ ನ್ಯಾಯಾಲಯ ನಿರ್ದೇಶಿಸಿದೆ.
ಸರ್ಕಾರಿ ಕೆಲಸವು ಜೀವನದ ಲಕ್ಷ್ಯವಾಗಿರಬಾರದು. ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ಜಿಡಿಪಿ ಕಡಿಮೆಯಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.ಪಿ.ಎಸ್.ಸಿ ರ್ಯಾಂಕ್ ಲೀಸ್ಟ್ ಉದ್ಯೋಗಾರ್ಥಿಗಳ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.