ನವದೆಹಲಿ: ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಮಿಷನ್ ಅಡಿ ಡಿಯಾಸ್ಪೊರಾ ರಾಜತಾಂತ್ರಿಕ ಸರಣಿಯ ಭಾಗವಾಗಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಚೆನ್ನೈನ ದೂತವಾಸ ಕಚೇರಿಯಲ್ಲಿ ಬುಧವಾರ ನಡೆಸಿದ ಕಾರ್ಯಕ್ರಮದಲ್ಲಿ ಗ್ರ್ಯಾಮಿ-ನಾಮನಿರ್ದೇಶಿತ ಭಾರತೀಯ ಅಮೇರಿಕನ್ ಗಾಯಕಿ ಪ್ರಿಯಾ ದರ್ಶಿನಿ ಭಾಗವಹಿಸಿದ್ದರು.
ಅಮೆರಿಕಾದ ಕಲೆ ಮತ್ತು ರಾಯಭಾರಿ ಯೋಜನೆ ಬೆಂಬಲಿತ ಕಾರ್ಯಕ್ರಮವನ್ನು ಚೆನ್ನೈನಲ್ಲಿರುವ ಯುಎಸ್ ದೂತವಾಸ ಕಚೇರಿಯ ಫೇಸ್ ಬುಕ್ ಪೇಜ್ ನಲ್ಲಿ ನೇರಪ್ರಸಾರ ಮಾಡಲಾಯಿತು. ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಪ್ರಿಯಾ ದರ್ಶಿನಿ ಪಾಂಡಿತ್ಯ ಪಡೆದುಕೊಂಡಿದ್ದು, ಇವರ ಮೊದಲ ಆಲ್ಬಂ "ಪೆರಿಫೇರಿ" ಹೊಸ ಯುಗದ ಅತ್ಯುತ್ತಮ ಆಲ್ಬಮ್‌ಗಾಗಿ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಆಗಸ್ಟ್ 19 ರಂದು ಪ್ರಿಯದರ್ಶಿನಿ ಮತ್ತು ಹೌಸ್ ಆಫ್ ವಾಟರ್ಸ್ ಬ್ಯಾಂಡ್, ಹ್ಯಾಮರ್ಡ್ ಡಲ್ಸಿಮರ್ ಕಲಾವಿದ ಮ್ಯಾಕ್ಸ್ ZT, ಬಾಸ್ ಗಿಟಾರ್ ವಾದಕ ಮೊಟೊ ಫುಕುಶಿಮಾ ಮತ್ತು ಡ್ರಮ್ಮರ್ ಸನ್ನಿ ಜೈನ್ ಅವರನ್ನು ಒಳಗೊಂಡಂತೆ ಉದಯೋನ್ಮುಖ ಸಂಗೀತಗಾರರಿಗೆ ಉಚಿತ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ. ನೀವೂ ಕೂಡಾ ಅದರಲ್ಲಿ ಭಾಗವಹಿಸಲು ದಯವಿಟ್ಟು ಈ ಲಿಂಕ್ ಮೂಲಕ ನೋಂದಾಯಿಸಬಹುದು. ಬೆಂಗಳೂರು ಮೂಲದ ಭಾರತೀಯ ಸಂಗೀತ ಅನುಭವ ಮ್ಯೂಸಿಯಂ ಸಹಭಾಗಿತ್ವದಲ್ಲಿ ಆಯೋಜಿಸಿರುವ ಸಂಗೀತ ಕಾರ್ಯಕ್ರಮವನ್ನು ಅವರ ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ.
#DiasporaDiplomacy ಸರಣಿಯು ಭಾರತ ಮತ್ತು ಅಮೆರಿಕಾ ನಡುವಿನ ಆಳವಾದ ಬಾಂಧವ್ಯವನ್ನು ಸಾರಿ ಹೇಳುತ್ತದೆ. ಈ ಸರಣಿಯು ಭಾರತೀಯ ವ್ಯಾಪಾರ, ಶೈಕ್ಷಣಿಕ, ನಾವೀನ್ಯತೆ, ಆರೋಗ್ಯ ಮತ್ತು ವಿಜ್ಞಾನ ಕ್ಷೇತ್ರಗಳಿಗೆ ಭಾರತೀಯ ಅಮೆರಿಕನ್ ಸಮುದಾಯದ ಅಸಾಧಾರಣ ಕೊಡುಗೆಗಳನ್ನು ಎತ್ತಿ ತೋರಿಸಲಾಗುತ್ತಿದೆ.
ಖ್ಯಾತಿ ಸಂಗೀತಗಾರ್ತಿ ಪ್ರಿಯದರ್ಶಿನಿ ಮೆಚ್ಚುಗೆ ಮಾತು:
"ನಾನು #ಡಿಯಾಸ್ಪೊರಾ ಡಿಪ್ಲೊಮಸಿಯ ಜೊತೆಗೆ ಅಮೆರಿಕದಲ್ಲಿರುವ ವೈವಿಧ್ಯಮಯ ಭಾರತೀಯ ವಲಸಿಗ ಸಮುದಾಯದ ಭಾಗವಾಗಿರುವುದಕ್ಕೆ ನನಗೆ ತುಂಬಾ ಗೌರವವಿದೆ. ಮಹಾರಾಷ್ಟ್ರ ಮತ್ತು ಗುಜರಾತಿ ನೆರೆಹೊರೆಯ ಬಹುಸಂಸ್ಕೃತಿಯನ್ನು ಸಾರುವ ಮುಂಬೈನಲ್ಲಿ ಪ್ರಾಥಮಿಕ ಬದುಕು ಸಾಗಿದ್ದು, ತಮಿಳುನಾಡಿನಲ್ಲಿ ಪ್ರೌಢಾವಸ್ಥೆಯನ್ನು ತಮಿಳುನಾಡಿನ ಮನೆಯಲ್ಲಿ ಕಳೆದಿದ್ದರಿಂದ ನನಗೆ ಎಲ್ಲ ಸಂಸ್ಕೃತಿಗಳ ಪರಿಧಿಯಲ್ಲಿ ಇರುವಂತೆ ಭಾಸವಾಗುತ್ತದೆ. ಅಲ್ಲಿಂದ ಮುಂದೆ ಅಮೆರಿಕಕ್ಕೆ ತೆರಳುವುದು ಮತ್ತು ನ್ಯೂಯಾರ್ಕ್ ನಗರದಲ್ಲಿ ವಾಸಿಸುವುದು ಹೊಸ ಮತ್ತು ಆಕರ್ಷಕ ದಾರಿಯನ್ನು ತೋರಿಸಿತು. ಹಲವು ದೃಷ್ಟಿಕೋನ, ಆಲೋಚನೆಯನ್ನು ಹೊಂದಿರುವವರಿಗೆ ಅರ್ಥವಾಗುವ ಏಕೈಕ ಭಾಷೆ ಸಂಗೀತ ಎಂಬುದು ನನ್ನಲ್ಲಿ ಹೊಸ ಪ್ರೇರಣೆಯನ್ನು ತುಂಬಿತು. ಅನೇಕರಿಗೆ ಭಾವನೆಗಳನ್ನು ಅವರಿಗೆ ಅರ್ಥವಾಗುವ ಸಂಗೀತದ ಭಾಷೆಯಲ್ಲಿ ತಲುಪಿಸುವ ಕಾರ್ಯ ಬಹಳಷ್ಟು ಸಂತೋಷವನ್ನು ಉಂಟು ಮಾಡುತ್ತಿದೆ," ಎಂದು ಪ್ರಿಯದರ್ಶಿನಿ ಹೇಳಿದ್ದಾರೆ.
#DiasporaDiplomacy ಸರಣಿ ಕುರಿತು ತಿಳಿಯಿರಿ:
ಸುಂದರ್ ಪಿಚೈ. ಸುನೀತಾ ವಿಲಿಯಮ್ಸ್ ವಿವೇಕ್ ಮೂರ್ತಿ ಸ್ಪೆಲ್ಲಿಂಗ್ ಬೀ ಗೆಲ್ಲುವುದರಿಂದ ಹಿಡಿದು, ನಮ್ಮ ಕೆಲವು ದೊಡ್ಡ ಕಂಪನಿಗಳನ್ನು ನಡೆಸುವವರೆಗೆ ಉಭಯ ರಾಷ್ಟ್ರಗಳ ಸರ್ಕಾರಗಳು ಅಮೆರಿಕಾಕ್ಕೆ ಸಮಾನವಾಗಿ ನೀಡಿದ ಕೊಡುಗೆಗಳಿಗೆ ಧ್ವನಿ ನೀಡಲಾಗುತ್ತದೆ. ಸಾಧಕರ ಯಶಸ್ಸಿನ ಗುಟ್ಟೇನು? ಭಾರತೀಯ ಅಮೆರಿಕನ್ ವಲಸಿಗರ ಗುರುತು, ಸಾಧನೆಗಳು, ಅಂಗೀಕೃತ ಆಚರಣೆ ಬಗ್ಗೆ #DiasporaDiplomacy ಸರಣಿಯಲ್ಲಿ ಹೇಳಲಾಗುತ್ತದೆ. ಇದರ ಜೊತೆಗೆ ಜೀವನದ ವಿವಿಧ ಹಂತಗಳಲ್ಲಿ ಭಾರತೀಯ ಅಮೇರಿಕನ್ ಸಾಧಕರು ತಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಆಶ್ರಯದ ಮೂಲಕ ಅಮೆರಿಕದಲ್ಲಿ ಹೇಗೆ ಅವಕಾಶಗಳನ್ನು ಸೃಷ್ಟಿಸಲಾಯಿತು ಎಂಬುದರ ಬಗ್ಗೆ ಅತಿಥಿ ಉಪನ್ಯಾಸಕರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಭಾರತೀಯ ಅಮೆರಿಕನ್ ಸಮುದಾಯ ವ್ಯಾಪಾರ, ಅಕಾಡೆಮಿ, ರಾಜಕೀಯ ಕ್ಷೇತ್ರ, ಕಲೆ ಮತ್ತು ನಾಗರಿಕ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಚಿತ್ರಿಸುವ ಯುಎಸ್ ಮಿಷನ್ ಇಂಡಿಯಾಕ್ಕೆ ನೀವೂ ಸೇರಿಕೊಳ್ಳಿರಿ.
ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ಪ್ರಿಯದರ್ಶಿನಿ ಹಿನ್ನೆಲೆ:
2021 ಗ್ರ್ಯಾಮಿ-ನಾಮನಿರ್ದೇಶಿತ ಪ್ರಿಯಾ ದರ್ಶಿನಿ ಭಾರತೀಯ ಶಾಸ್ತ್ರೀಯ ಸಂಗೀತದಿಂದ ತಮ್ಮ ಬದುಕು ಶುರು ಮಾಡಿದರು. ಆದರೆ ಆಕರ್ಷಕ ಧ್ವನಿ, ಹೊಸತನದ ಜೊತೆಗೆ ಆಲೋಚನೆ ವೈಖರಿ ಜಾಗತಿಕ ಮಟ್ಟದಲ್ಲಿ ಹೆಸರು ತಂದು ಕೊಟ್ಟಿದೆ. ಅವರು ಶ್ರೇಣಿ, ತಂತ್ರ, ಅಸಾಂಪ್ರದಾಯಿಕ ಸಂಯೋಜನೆಗಳು, ಸ್ತ್ರೀವಾದಿ ದೃಷ್ಟಿಕೋನ, ವಿಶಿಷ್ಟವಾದ ಅದ್ಭುತ ಧ್ವನಿಯ ಮೂಲಕ ಅತ್ಯಾಕರ್ಷಕ ಸಂಯೋಜನೆಯನ್ನು ಪ್ರಸ್ತುತಪಡಿಸುತ್ತಾರೆ. ನಟಿ, ಕಾರ್ಯಕರ್ತೆ ಮತ್ತು ಸಂಗೀತಗಾರರಾದ ಪ್ರಿಯಾ ಹಲವಾರು ಗ್ರ್ಯಾಮಿ ಪ್ರಶಸ್ತಿ ವಿಜೇತರು ಸೇರಿದಂತೆ ಪ್ರಪಂಚದಾದ್ಯಂತದ ವ್ಯಾಪಕ ಶ್ರೇಣಿಯ ಕಲಾವಿದರೊಂದಿಗೆ ಗುರುತಿಸಿಕೊಂಡಿಸಿದ್ದಾರೆ. ಇವರ ಮೊದಲ ಆಲ್ಬಂ ಪೆರಿಫೇರಿ ಆಲ್ಬಮ್ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು.
ಗಣ್ಯರೊಂದಿಗೆ ವೇದಿಕೆ ಹಂಚಿಕೊಂಡ ಪ್ರಿಯದರ್ಶಿನಿ:
ಹೌಸ್ ಆಫ್ ವಾಟರ್ಸ್ ESPN ಗಾಗಿ ಎಮ್ಮಿ-ವಿಜೇತ ಸಾಕ್ಷ್ಯಚಿತ್ರವನ್ನು ಗಳಿಸಿದೆ ಮತ್ತು ಪಂಡಿತ್ ರವಿಶಂಕರ್, ವಿಕ್ಟರ್ ವೂಟೆನ್, ತಿನಾರಿವೆನ್, ಸ್ನಾರ್ಕಿ ಪಪ್ಪಿ ಮತ್ತು ಕಾರ್ಶ್ ಕೇಲ್ ಸೇರಿದಂತೆ ಶತಮಾನದ ಕೆಲವು ಪ್ರಭಾವಿ ಸಂಗೀತಗಾರರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ.