ಗಡಿನಾಡು ಕಾಸರಗೋಡಿನ ವೈವಿಧ್ಯಮಯ ಮಾಧ್ಯಮ ಕ್ಷೇತ್ರದಲ್ಲಿ ಅನೇಕನೇಕ ಸಾಧಕರು ತಮ್ಮದೇ ಕೊಡುಗೆಗಳ ಮೂಲಕ ಗರಿಮೆ ತಂದಿದ್ದಾರೆ. ವಾರ್ತೆ, ಸಿನಿಮ, ಕ್ರೀಡೆ, ರಾಜಕೀಯ, ಸಾಹಿತ್ಯ, ಸಾಮಾಜಿಕ ಹೀಗೆ ವಿವಿಧ ಆಯಾಮಗಳ ಅಕ್ಷರ ಕ್ರಾಂತಿಯ ಸಾಧಕರ ಈ ನೆಲದಲ್ಲಿ ಕಳೆದೊಂದು ದಶಕಗಳಿಂದ ಬೆರಗುಮೂಡಿಸಿ ಮುನ್ನಡೆಯುತ್ತಿರುವ ಯಕ್ಷಗಾನ ಸಾಹಿತ್ಯ ಪತ್ರಿಕೆ "ಕಣಿಪುರ". ಯಕ್ಷಗಾನದ ಸಮಗ್ರ ಆಯಾಮಗಳನ್ನು ಅಕಡೆಮಿಕ್ ಆಗಿ ಗುರುತಿಸಿ ಚರ್ಚಿಸುವಲ್ಲಿ, ವಸ್ತುವಿನ ಒಳಹೊಕ್ಕು ಹೊಸತೊಂದರ ಆವಿರ್ಭಾವಕ್ಕೆ ಕಾರಣೀಭೂತರಾಗುವ ಕಣಿಪುರದ ಸಂಪಾದಕ ಎಂ.ನಾರಾಯಣ ಚಂಬಲ್ತಿಮಾರ್ ಅವರದು ಪಾದರಸದ ವ್ಯಕ್ತಿತ್ವ. ಸದಾ ಕ್ರೀಯಾಶೀಲರಾಗಿರುವ ಎಂ.ನಾ.ರ ಚಿಂತನೆ, ಧೋರಣೆಗಳು ಯೋಚನೆ, ಯೋಜನೆಗೆ ಹಚ್ಚುವ ಶಕ್ತಿ ಉಳ್ಳದ್ದು.
ಮೂರೂವರೆ ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ನಾ ರ ಬದುಕು, ಬರಹ, ಸಾಧನೆಗಳ ಬಗ್ಗೆ ಸಮರಸ ಸುದ್ದಿ ಸಂವಾದದ ಮೂಲಕ ಬೆಳಕುಚೆಲ್ಲಲು ಪ್ರಯತ್ನಿಸಿದ್ದು, ವೀಕ್ಷಿಸಿ, ಪ್ರೋತ್ಸಾಹಿಸಿ.
ಸಮರಸ-ಸಂವಾದ: ಸಂಚಿಕೆಯಿoದ ಸಂಚಿಕೆಗೆ ಏರುಸ್ಥಾಯಿಯ ಯಕ್ಷ ಕಣ್ಮಣಿ ಕಣಿಪುರ: ಅತಿಥಿ: ಎಂ.ನಾ.ಚಂಬಲ್ತಿಮಾರ್
0
ಆಗಸ್ಟ್ 15, 2021
Tags