ತಿರುವನಂತಪುರಂ: ನವೆಂಬರ್ 1 ರಿಂದ ಸ್ಮಾರ್ಟ್ ಪಡಿತರ ಕಾರ್ಡ್ ಲಭ್ಯವಾಗಲಿದೆ ಎಂದು ಆಹಾರ ಸಚಿವ ಜಿಆರ್ ಅನಿಲ್ ಹೇಳಿರುವರು. ಪೋಸ್ಟ್ ಕಾರ್ಡ್ ಗಾತ್ರದ ಕಾರ್ಡ್‍ಗಳಿಗೆ ನೀವು 25 ರೂ.ಪಾವತಿಸಬೇಕಾಗುತ್ತದೆ. ಅಗತ್ಯವಿರುವವರಿಗೆ ಮಾತ್ರ ಸ್ಮಾರ್ಟ್ ಕಾರ್ಡ್‍ಗಳನ್ನು ನೀಡಲಾಗುತ್ತದೆ. ಸಾಮಾನ್ಯ ಕಾರ್ಡ್ ಪ್ರಕ್ರಿಯೆಗಳನ್ನು ಅನುಸರಿಸುವ ಮೂಲಕ ಪಡಿತರ ಚೀಟಿಯನ್ನು ಸ್ಮಾರ್ಟ್ ಮಾಡಬಹುದು ಎಂದು ಸಚಿವರು ಹೇಳಿದರು.
ನೇರವಾಗಿ ತಾಲೂಕು ಪೂರೈಕೆ ಕಚೇರಿಯಲ್ಲಿ ಅಥವಾ ನಾಗರಿಕ ಪೂರೈಕೆ ಇಲಾಖೆಯ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಕ್ಯೂಆರ್ ಕೋಡ್ ಮತ್ತು ಬಾರ್ ಕೋಡ್ ಹೊಂದಿರುವ ಕಾರ್ಡ್ ಮುಂಭಾಗದಲ್ಲಿ ಪಡಿತರ ಚೀಟಿಯ ಯಜಮಾನರ ಹೆಸರು, ಪೋಟೋ ಮತ್ತು ವಿಳಾಸವನ್ನು ಹೊಂದಿರುತ್ತದೆ. ಕಳೆದ ಫೆಬ್ರವರಿಯಲ್ಲಿ ಪರಿಚಯಿಸಲಾದ ಇ-ಪಡಿತರ ಚೀಟಿಯನ್ನು ಮಾರ್ಪಡಿಸುವ ಮೂಲಕ ಸ್ಮಾರ್ಟ್ ಕಾರ್ಡ್ ಮಾಡಲಾಗಿದೆ.
ಇ-ಕಾರ್ಡ್ ನ್ನು ಆಧಾರ್ ಕಾರ್ಡ್ ಮಾದರಿಯಲ್ಲಿ ಮಾಡಲಾಗಿದೆ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರು ತಾವೇ ಮುದ್ರಿಸಿ ಬಳಸಬಹುದು. ತಾಲ್ಲೂಕು ಪೂರೈಕೆ ಅಧಿಕಾರಿಯಿಂದ ಆನ್‍ಲೈನ್ ಅರ್ಜಿಯನ್ನು ಅನುಮೋದಿಸಿದ ನಂತರ, ಪಿಡಿಎಫ್ ರೂಪದಲ್ಲಿ ಪಡಿತರ ಚೀಟಿ ಮುದ್ರಣವನ್ನು ಪಡೆಯಬಹುದು.