HEALTH TIPS

ಕಾಸರಗೋಡು ಅಭಿವೃಧ್ಧಿ ಪ್ಯಾಕೇಜ್: ಜಿಲ್ಲೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವುದು 11.47 ಕೋಟಿ ರೂ.ನ ಕುಡಿಯುವ ನೀರು-ನೀರಾವರಿ ಯೋಜನೆಗಳು

   

                 ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಜಾರಿಗೊಳಿಸಿರುವ 11.47 ಕೋಟಿ ರೂ.ನ ನೀರಾವರಿ-ಕುಡಿಯುವ ನೀರು ಯೋಜನೆಗಳು ಉದ್ಘಾಟನೆಗೆ ಸಿದ್ಧಗೊಂಡಿವೆ.  

                ಕಳ್ಳಾರ್ ಗ್ರಾಮ ಪಂಚಾಯತ್ ನ ಪಾಣತ್ತೂರು ನದಿಯ ಕಾಪ್ಪುಂಗರ ಚೆಕ್ ಡಾಂ ಬ್ರಿಜ್ ನಿರ್ಮಿಸಲಾದ ಯೋಜನೆಯಿದ್ದು, 5 ಕೋಟಿ ರೂ.ನ ಯೋಜನೆ ಇದಾಗಿದೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿಗೆ ಕುಡಿಯುವ ನೀರಿನ ವಿತರಣೆ ಯೋಜನೆರಯಿದ್ದು, 8 ಕೋಟಿ ರೂ.ನ ಯೋಜನೆಯಿದೆ. ನೀರಾವರಿ ಇಲಾಖೆ ಇವುಗಳ ನಿರ್ಮಾಣ ಏಜೆನ್ಸಿಯಾಗಿದೆ. 

              ಜಿಲ್ಲೆಯಲ್ಲಿ ನೀರಾವರಿಗಾಗಿ ಚೆಕ್ ಡಾಂ ನಿರ್ಮಾಣ ಸಂಬಂಧ ಇನ್ವೆಸ್ಟಿಗೇಷನ್ ಚಟುವಟಿಕೆಗಳಲ್ಲಿ 13 ಕಾಮಗಾರಿಗಳು ಪೂರ್ಣಗೊಂಡಿವೆ. ಬಳಾಲ್ ಗ್ರಾಮ ಪಂಚಾಯತ್ ನ ದೇವಗಿರಿ ಕಾಲನಿ ಬಳಿ ಮೈಕಯಂ ಕೊನ್ನಕ್ಕಾಡು ಚೈತ್ರವಾಹಿನಿ ನದಿ ತಟದಲ್ಲಿ ಟ್ರಾಕ್ ವೇ ಜತೆಗಿನ ತಡೆಗೋಡೆ ನಿರ್ಮಾಣ, ಕುಂಬಳೆ ಗ್ರಾಮ ಪಂಚಾಯತ್ ನ ಉಳುವಾರು ಕುಡಿಯುವ ನೀರಿನ ವಿತರಣೆ ಯೋಜನೆ, ಕಾರಡ್ಕ ಗ್ರಾಮ ಪಂಚಾಯತ್ ನ ಕರಣಿ ಅರತ್ತಲಂ ನದಿಯಲ್ಲಿ ವಿ.ಸಿ.ಬವಿ. ಕಂ ಟ್ರಾಕ್ ವೇ ನಿರ್ಮಾಣ, ಕಿನಾನೂರು-ಕರಿಂದಳಂ ಪಂಚಾಯತ್ ನ ಪಾಂಬಂಗಾನಂ ಕೂಟಮಲ ತೋಡಿನ ಬಿ.ಸಿ.ಬಿ. ಕಂ ಬ್ರಿಜ್ ನಿರ್ಮಾಣ ಸಹಿತ ಯೋಜನೆಗಳು ಈ ಸಾಲಿನಲ್ಲಿ ಸೇರಿವೆ. ರಾಜ್ಯ ಸರಕಾರದ ನೂರು ದಿನಗಳ ಕ್ರಿಯಾ ಯೋಜನೆ ಅಂಗವಾಗಿ ಇವುಗಳನ್ನು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಇವುಗಳನ್ನು ಅಳವಡಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries