HEALTH TIPS

ರಾಜ್ಯದಲ್ಲಿ ಇಂದು 11,699 ಮಂದಿಗೆ ಕೋವಿಡ್ ಪತ್ತೆ: 80,372 ಮಾದರಿಗಳ ಪರೀಕ್ಷೆ: ಪರೀಕ್ಷಾ ಧನಾತ್ಮಕ ದರ ಶೇ.14.55

                   ತಿರುವನಂತಪುರಂ: ಕೇರಳದಲ್ಲಿ ಇಂದು 11,699 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ.  ತ್ರಿಶೂರ್ 1667, ಎರ್ನಾಕುಳಂ 1529, ತಿರುವನಂತಪುರ 1133, ಕೋಝಿಕ್ಕೋಡ್ 997, ಮಲಪ್ಪುರಂ 942, ಕೊಲ್ಲಂ 891, ಕೊಟ್ಟಾಯಂ 870, ಪಾಲಕ್ಕಾಡ್ 792, ಆಲಪ್ಪುಳ 766, ಕಣ್ಣೂರು 755, ಪತ್ತನಂತಿಟ್ಟ 488, ಇಡುಕ್ಕಿ 439, ವಯನಾಡ್ 286 ಮತ್ತು ಕಾಸರಗೋಡು 144 ಎಂಬಂತೆ ಸೋಂಕು ದೃಢಪಡಿಸಲಾಗಿದೆ.

                   ಕಳೆದ 24 ಗಂಟೆಗಳಲ್ಲಿ 80,372 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತವು 10 ಕ್ಕಿಂತ ಹೆಚ್ಚಿರುವ 422 ಸ್ಥಳೀಯ ಸಂಸ್ಥೆಗಳಲ್ಲಿ 841 ವಾರ್ಡ್‍ಗಳನ್ನು ಒಳಗೊಂಡಿದೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.

              ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,78,087 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,56,821 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 21,266 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 1318 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಸ್ತುತ, 1,57,158 ಕೋವಿಡ್ ಪ್ರಕರಣಗಳಲ್ಲಿ, ಕೇವಲ 12.3 ಪ್ರತಿಶತದಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

                    ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 58 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಮೃತರಾದವರ ಸಂಖ್ಯೆ 24,661 ಕ್ಕೆ ಏರಿಕೆಯಾಗಿದೆ.

           ಇಂದು, ಸೋಂಕು ಪತ್ತೆಯಾದವರಲ್ಲಿ 32 ಮಂದಿ ಜನರು ಹೊರ ರಾಜ್ಯದಿಂದ ಬಂದÀವರು. 11,134 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 492 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 41 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ. 

                   ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 17,763 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 2096, ಕೊಲ್ಲಂ 126, ಪತ್ತನಂತಿಟ್ಟ 426, ಅಲಪ್ಪುಳ 1285, ಕೊಟ್ಟಾಯಂ 1646, ಇಡುಕ್ಕಿ 681, ಎರ್ನಾಕುಳಂ 606, ತ್ರಿಶೂರ್ 4496, ಪಾಲಕ್ಕಾಡ್ 941, ಮಲಪ್ಪುರಂ 1947, ಕೋಝಿಕ್ಕೋಡ್ 1790, ವಯನಾಡ್ 801, ಕಣ್ಣೂರು 628 ಮತ್ತು ಕಾಸರಗೋಡು 294 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 1,57,158 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 44,59,193 ಮಂದಿ ಜನರನ್ನು ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries