ಕುಂಬಳೆ: ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಗಳವರ ಷಷ್ಠ್ಯಬ್ಧ ಸಂಭ್ರಮದ ಆಚರಣೆಯ ಪ್ರಯುಕ್ತ ರೂಪೀಕರಿಸಿದ ಕಾಸರಗೋಡು ವಲಯ ಸಮಿತಿಯ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉತ್ಸವವು ಒಡಿಯೂರು ಸ್ವಾದ್ವಿ ಶ್ರೀಮಾತಾನಂದಮಯೀ ಹಾಗೂ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಅ.11 ರಂದು ಬೆಳಿಗ್ಗೆ 10ಕ್ಕೆ ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ನಡೆಯಲಿದೆ.
ಷಷ್ಠ್ಯಬ್ದ ಸಂಭ್ರಮವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಕಾಸರಗೋಡು ವಲಯ ಸಮಿತಿ,ಕಾಸರಗೋಡು ವಲಯ ಮಹಿಳಾ ಸಮಿತಿ, ಕನ್ನಡ ಗ್ರಾಮ ಮಹಿಳಾ ಸಮಿತಿ,ಜಂಟಿಯಾಗಿ ಈಗಾಗಲೇ ನಡೆಸಿರುವ "ಸರಣಿ ಕಾರ್ಯಕ್ರಮಗಳ ಅವಲೋಕನ ಸಭೆ" ಅ.2 ರಂದು ಸಂಜೆ 4ಕ್ಕೆ ಕಾಸರಗೋಡು ಕನ್ನಡ ಗ್ರಾಮದ ಸಾಂಸ್ಕøತಿಕ ಮಂಟಪದಲ್ಲಿ ನಡೆಯಲಿದೆ. ಜಂಟಿ ಸಮಿತಿಗಳ ವಿಶೇಷ ಸಿದ್ಧತಾ ಸಭೆಯನ್ನು ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ನಡೆಯುವ ಸಮಾರೋಪ ಸಮಾರಂಭ ಉತ್ಸವದ ಯಶಸ್ವಿ ಸಂಘಟನೆಗಾಗಿ ಅ. 3 ಎಂದು ಬೆಳಿಗ್ಗೆ 10-30ಕ್ಕೆ ವ್ಯಾಸ ಮಂಟಪದಲ್ಲಿ ಆಯೋಜಿಸಲಾಗಿದೆ. ವಿವಿಧ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರೀ ಸಮಿತಿಯ ಸದಸ್ಯರು ಹಾಗೂ ಸರ್ವ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಸಲಹೆ ಸೂಚನೆಗಳನ್ನಿತ್ತು ಸಹಕರಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.