ಕಾಸರಗೋಡು: ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಆದೇಶ ಪ್ರಕಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೇತೃತ್ವದಲ್ಲಿ ಕಾಸರಗೋಡು, ಹೊಸದುರ್ಗ ನ್ಯಾಯಾಲಯ ಕೇಂದ್ರಗಳಲ್ಲಿ ಸೆ.11ರಂದು ನ್ಯಾಷನಲ್ ಲೋಕ ಅದಾಲತ್ ನಡೆಯಲಿವೆ.
ಅದಾಲತ್ ಅಂಗವಾಗಿ ಪ್ರೀ ಟಾಕ್ ಆರಂಭಗೊಂಡಿದೆ. ನೆಗೋಷೆಬಲ್ ಇನ್ಸುಸ್ಟ್ರುಮೆಂಟ್ ಆಕ್ಟ್ ಸೆಕ್ಷನ್ 138 ಪ್ರಕಾರದ ಕೇಸುಗಳು, ನೌಕರಿ ಸಂಬಂಧ ತಗಾದೆಗಳು, ಮೈಟೆನೆನ್ಸ್ ಕೇಸುಗಳು, ಮಾತುಕತೆ ಮೂಲಕ ಬಗೆಹರಿಸಬಹುದಾದ ಕ್ರಿಮಿನಲ್ ಕೇಸುಗಳು ಇತ್ಯಾದಿಗಳ ದೂರುಗಳನ್ನು ಅದಾಲತ್ ನಲ್ಲಿ ಪರಿಶೀಲಿಸಲಾಗುವುದು. ಕುಟುಂಬ ನ್ಯಾಲಾಯದಲ್ಲಿರುವ
ವಿಚ್ಛೇದನೆ ಪ್ರಕರಣಗಳ ಹೊರತಾಗಿ ವಿವಿಧ ಕೇಸುಗಳಲ್ಲಿ ಸದ್ರಿ ಮಾತುಕತೆ ಮೂಲಕ ಬಗೆಹರಿಸಬಹುದಾದ ಕ್ರಿಮಿನಲ್ ಕೇಸುಗಳು, ಮೋಟಾರು ವಾಹನ ನಷ್ಟಪರಿಹಾರ ಕೇಸುಗಳು, ಚೆಕ್ ಕೇಸುಗಳು, ಲೇಬರ್ ನ್ಯಾಯಾಲಯಗಳ ಕೇಸುಗಳು, ಜಾಗ ಸ್ವಾಧೀನ ಸಂಬಂಧ ಕೇಸುಗಳು, ಸೇವಾ ಸಂಬಂಧಿ ಕೇಸುಗಳು, ಕೇರಳ ಅಂಟುರೋಗ ನಿಯಂತ್ರಣ ಆರ್ಡನೆನ್ಸ್ ಪ್ರಕಾರ ದಾಖಲಾದ ಕೇಸುಗಳು, ಪೆಟ್ಟಿ ಕೇಸ್ ಗಳು, ಸಿವಿಲ್ ನ್ಯಾಯಾಲಯದಲ್ಲಿರುವ ಕೇಸುಗಳು ಇತ್ಯಾದಿಗಳನ್ನು ಅದಾಲತ್ ನಲ್ಲಿ ಪರಿಶೀಲಿಸಲಾಗುವುದು.
ಹೆಚ್ಚುವರಿ ಮಾಹಿತಿಗಳಿಗಾಗಿ ತಾಲೂಕು ಕಾನೂನು ಸೇವಾ ಸಮಿತಿ, ಹೊಸದುರ್ಗ ಯಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು: 046722070170, 04994256189.