ತಿರುವನಂತಪುರಂ: ರಾಜ್ಯದಲ್ಲಿ ಇಂದು 12,161 ಮಂದಿ ಜನರಿಗೆ ಕೋವಿಡ್ -19 ದೃಢಪಟ್ಟಿದೆ. ತ್ರಿಶೂರ್ 1541, ಎರ್ನಾಕುಳಂ 1526, ತಿರುವನಂತಪುರ 1282, ಕೋಝಿಕ್ಕೋಡ್ 1275, ಮಲಪ್ಪುರಂ 1017, ಕೊಟ್ಟಾಯಂ 886, ಕೊಲ್ಲಂ 841, ಪಾಲಕ್ಕಾಡ್ 831, ಕಣ್ಣೂರು 666, ಆಲಪ್ಪುಳ 647, ಇಡುಕ್ಕಿ 606, ಪತ್ತನಂತಿಟ್ಟ 458, ವಯನಾಡು 457 ಮತ್ತು ಕಾಸರಗೋಡು 128 ಎಂಬಂತೆ ಕೋವಿಡ್ ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 90,394 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ (WIPR) 10 ಕ್ಕಿಂತ ಹಡಚ್ಚಿರುವ 368 ಸ್ಥಳೀಯ ಸಂಸ್ಥೆಗಳಲ್ಲಿ 745 ವಾರ್ಡ್‌ಗಳನ್ನು ಒಳಗೊಂಡಿದೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,56,952 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,36,837 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 20,115 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 1284 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರಸ್ತುತ, 1,43,500 ಕೋವಿಡ್ ಪ್ರಕರಣಗಳಲ್ಲಿ, ಶೇಕಡಾ 12.7 ರಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 155 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 24,965 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 64 ಮಂದಿ ಜನರು ಹೊರ ರಾಜ್ಯದವರು. 11,413 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 598 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. 86 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 17,862 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 743, ಕೊಲ್ಲಂ 125, ಪತ್ತನಂತಿಟ್ಟ 1212, ಆಲಪ್ಪುಳ 1077, ಕೊಟ್ಟಾಯಂ 1240, ಇಡುಕ್ಕಿ 813, ಎರ್ನಾಕುಳಂ 2518, ತ್ರಿಶೂರ್ 3976, ಪಾಲಕ್ಕಾಡ್ 834, ಮಲಪ್ಪುರಂ 1593, ಕೋಝಿಕ್ಕೋಡ್ 2184, ವಯನಾಡ್ 458, ಕಣ್ಣೂರು 712 ಮತ್ತು ಕಾಸರಗೋಡು 377 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 1,43,500 ಮಂದಿ ಜನರಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಅವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 44,95,904 ಮಂದಿ ಜನರು ಇಲ್ಲಿಯವರೆಗೆ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.