HEALTH TIPS

ಆತಂಕ ಸೃಷ್ಟಿಸಿರುವ ಸಿ.1.2 ಕೋವಿಡ್ ರೂಪಾಂತರಿ ಭಾರತದಲ್ಲಿ ಪತ್ತೆಯಾಗಿಲ್ಲ: ಕೇಂದ್ರ

             ನವದೆಹಲಿದಕ್ಷಿಣ ಆಫ್ರಿಕಾ ಮತ್ತು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಪತ್ತೆಯಾಗಿರುವ ಹೆಚ್ಚು ಸಾಂಕ್ರಾಮಿಕ ಎನ್ನಲಾದ ಸಿ.1.2 ಕೋವಿಡ್ ರೂಪಾಂತರಿ ವೈರಸ್ ಭಾರತದಲ್ಲಿ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

           ಕೋವಿಡ್ -19ನ ಹೊಸ ರೂಪಾಂತರಿ ಸಿ.1.2 ಹೆಚ್ಚು ಹರಡಬಲ್ಲ ಮತ್ತು ಲಸಿಕೆಗಳು ಒದಗಿಸುವ ರಕ್ಷಣೆಯನ್ನು ತಪ್ಪಿಸುತ್ತದೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ.

          ಈ ವರ್ಷದ ಮೇ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಈ ತಳಿಯು ಅತ್ಯಂತ ಕಳವಳಕಾರಿಯಾಗಿದ್ದಾಗಿದೆ ಎಂದು ದಕ್ಷಿಣ ಆಫ್ರಿಕಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕೇಬಲ್ ಡಿಸೀಸಸ್ (ಎನ್‌ಐಸಿಡಿ) ಮತ್ತು ಕ್ವಾಜುಲು-ನಟಾಲ್ ರಿಸರ್ಚ್ ಇನ್ನೋವೇಶನ್ ಅಂಡ್ ಸೀಕ್ವೆನ್ಸಿಂಗ್ ಪ್ಲಾಟ್‌ಫಾರ್ಮ್ (ಕೆಎಆರ್‌ಐಎಸ್‌ಪಿ)ನ ವಿಜ್ಞಾನಿಗಳು ಹೇಳಿದ್ದಾರೆ.

             'ಭಾರತದಲ್ಲಿ ಇದುವರೆಗೆ ಸಿ .1.2 ಕೋವಿಡ್ ರೂಪಾಂತರ ಸೋಂಕಿತ ಪ್ರಕರಣ ಪತ್ತೆಯಾಗಿಲ್ಲ' ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ನಿಟ್ಟಿನಲ್ಲಿ, ಇನ್‌ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ ಸಂಸ್ಥೆ ಎಚ್ಚರವಹಿಸುತ್ತಿದೆ.

                ಈ ಮಧ್ಯೆ, ಸಿ .1.2 ರೂಪಾಂತರದಲ್ಲಿ 100 ಸೀಕ್ವೆನ್ಸ್‌ಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಕೋವಿಡ್ ರೂಪಾಂತರವು ಚೀನಾ, ಕಾಂಗೋ , ಮಾರಿಷಸ್, ಯುಕೆ, ನ್ಯೂಜಿಲೆಂಡ್, ಪೋರ್ಚುಗಲ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಕಂಡುಬಂದಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.


.. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries