ಅಹಮದಾಬಾದ್: ಗುಜರಾತ್ ಕರಾವಳಿಯಲ್ಲಿ 12 ಸಿಬ್ಬಂದಿಯೊಂದಿಗೆ ಪಾಕಿಸ್ತಾನದ ಬೋಟ್ ಅನ್ನು ಭಾರತೀಯ ಕೋಸ್ಟ್ ಗಾರ್ಡ್(ಐಸಿಜಿ) ವಶಪಡಿಸಿಕೊಂಡಿದೆ.
ಐಸಿಜಿಯ ಕಣ್ಗಾವಲು ಪಡೆ ಮಂಗಳವಾರ ರಾತ್ರಿ ಪಾಕಿಸ್ತಾನದ ಬೋಟ್ ಅನ್ನು ಪ್ರತಿಕೂಲ ಹವಾಮಾನದ ನಡುವೆಯೂ ವಶಪಡಿಸಿಕೊಂಡಿದೆ.
ಸೆಪ್ಟೆಂಬರ್ 14ರ ರಾತ್ರಿ ಭಾರತೀಯ ಕೋಸ್ಟ್ ಗಾರ್ಡ್ ಹಡಗು 'ರಾಜರತನ್' ಕಣ್ಗಾವಲು ಕಾರ್ಯಾಚರಣೆಯಲ್ಲಿದ್ದಾಗ 'ಅಲ್ಲಾ ಪವಕಲ್' ಹೆಸರಿನ ಪಾಕಿಸ್ತಾನದ ದೋಣಿ ಭಾರತೀಯ ಸಮುದ್ರದಲ್ಲಿ 12 ಸಿಬ್ಬಂದಿಯೊಂದಿಗೆ ವಶಕ್ಕೆ ಪಡೆಯಲಾಯಿತು ಎಂದು ಐಸಿಜಿ ಹೇಳಿಕೆಯಲ್ಲಿ ತಿಳಿಸಿದೆ.
ಹೆಚ್ಚಿನ ತನಿಖೆಗಾಗಿ ದೋಣಿಯನ್ನು ಗುಜರಾತಿನ ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾಕ್ಕೆ ತರಲಾಯಿತು ಎಂದು ಹೇಳಿದೆ.