ಕೋಝಿಕ್ಕೋಡ್: ರಾಜ್ಯದಲ್ಲಿ ನಿಪಾ ವೈರಸ್ ಭೀತಿ ಮತ್ತೊಮ್ಮೆ ದೃಢಪಟ್ಟಿದೆ ಎಂಬ ಸೂಚನೆಗಳಿವೆ. ಶಂಕಿತ ಸೋಂಕು
12 ವರ್ಷದ ಮಗುವಲ್ಲಿ ಕಂಡುಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಚಾತ್ತಮಂಗಲಂನ ಚೂಳೂರು ಪ್ರದೇಶದಲ್ಲಿ ಮಗುವಿಗೆ ನಿಪಾ ವೈರಸ್ ಬಾಧಿಸಿರುವುದು ದೃಢಪಟ್ಟಿದೆ ಎಂದು ಶಂಕಿಸಲಾಗಿದೆ. ಪ್ರಾಥಮಿಕ ಪರೀಕ್ಷೆಯು ಇದು ನಿಪಾ ಎಂದು ಬಹುತೇಕ ದೃಢÀಡಿಸಿದೆ. ಸದ್ಯ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿಪ್ಪಾ ಲಕ್ಷಣಗಳೊಂದಿಗೆ ಬಾಲಕನನ್ನು ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮೊದಲು ಮಗು ಕೋವಿಡ್ ನಿಂದ ಬಳಲುತ್ತಿತ್ತು. ನಂತರ ನಿರಂತರ ಜ್ವರದ ಕಾರಣ ಆಸ್ಪತ್ರೆಗೆ ದಾಖಲಿಸಲಾಯಿತು.
ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಮೊದಲ ಮಾದರಿಯನ್ನು ಪುಣೆಯ ವೈರಾಲಜಿಗೆ ಕಳುಹಿಸಲಾಗಿತ್ತು. ಫಲಿತಾಂಶಗಳನ್ನು ಶುಕ್ರವಾರ ರಾತ್ರಿ ರಾಜ್ಯ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಇನ್ನೂ ಎರಡು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುವುದು. ರೋಗದ ಇರುವಿಕೆ ದೃಢಪಟ್ಟರೆ ಮಾತ್ರ ಕಾಳಜಿ ವಹಿಸಲಾಗುವುದು, ಪ್ರಸ್ತುತ ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ವಿಶೇಷ ವೈದ್ಯಕೀಯ ತಂಡ ಮತ್ತು ಕೇಂದ್ರ ವೈದ್ಯಕೀಯ ತಂಡ ನಿನ್ನೆ ಕೋಝಿಕೋಡ್ ತಲಪಿದೆ ಎಂದು ವರದಿಯಾಗಿದೆ.
ಖಾಸಗಿ ಆಸ್ಪತ್ರೆಗೆ ತಲುಪುವ ಮುನ್ನ, ಹುಡುಗನಿಗೆ ಬೇರೆ ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಪೆರಾಂಬಲೂರಿನಲ್ಲಿ ಮೇ 2018 ರಲ್ಲಿ ಮೊದಲ ಬಾರಿ ನಿಪಾ ದೃಢಪಡಿಸಲಾಗಿತ್ತು. ಬಳಿಕ, ವ್ಯಾಪಕವಾಗಿ ಹರಡಿತು. ಆರೋಗ್ಯ ಇಲಾಖೆಯು ಅದನ್ನು ಸಮರ್ಥವಾಗಿ ನಿಯಂತ್ರಿಸಿತು. ಈಗ ಮತ್ತೆ ನಿಪಾ ದೃಢಪಟ್ಟಿರುವ ವರದಿಗಳು ಕಳವಳಕಾರಿಯಾಗಿದೆ. ಸರ್ಕಾರದ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ.