ಪಣಜಿ: ಗೋವಾದಲ್ಲಿ ಜಾರಿಯಲ್ಲಿರುವ ಕರ್ಫ್ಯೂ ವನ್ನು ಸಪ್ಟೆಂಬರ್ 13 ರವರೆಗೆ ವಿಸ್ತರಣೆ ಮಾಡಲಾಗಿದೆ. ಕೇರಳದಿಂದ ಗೋವಾಕ್ಕೆ ಆಗಮಿಸುವವರಿಗೆ ಖಡ್ಡಾಯವಾಗು ಕ್ವಾರಂಟೈನ್‍ನಲ್ಲಿಡಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಆದೇಶ ಹೊರಡಿಸಿದೆ. ಇದರಿಂದಾಗಿ ಪ್ರಸಕ್ತ ವರ್ಷ ಗಣೇಶ ಚತುರ್ಥಿಯ ಸಂದರ್ಭದಲ್ಲಿಯೂ ಕೂಡ ಕೋವಿಡ್ ಕರಿನೆರಳು ಉಳಿದುಕೊಳ್ಳುವಂತಾಗಿದೆ.
ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಷ್ಟೇ ಅಲ್ಲದೆಯೇ ಗಣೇಶ ಚತುರ್ಥಿಯ ಸಂದರ್ಭದಲ್ಲಿಯೂ ಕೂಡ ಕೋವಿಡ್ ಹರಡುವುದನ್ನು ತಡೆಯಲು ರಾಜ್ಯದಲ್ಲಿ ಜಾರಿಯಲ್ಲಿರುವ ಕರ್ಫ್ಯೂ ಕಾಲಾವಧಿಯನ್ನು ಇನ್ನೂ ಒಂದು ವಾರಗಳ ಕಾಲ ವಿಸ್ತರಣೆ ಮಾಡಲಾಗಿದೆ.
ನಿಯಮಗಳನ್ನು ಪಾಲಿಸಿ ಹಬ್ಬ ಆಚರಿಸಿ-ಮುಖ್ಯಮಂತ್ರಿ ಸಾವಂತ್ :
ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜನತೆ ಸಾಮಾಜಿಕ ಅಂತರ ಕಾಯ್ದುಕೊಂಡು ಗಣೆಶೋತ್ಸವ ಆಚರಿಸಬೇಕು. ಸರ್ಕಾರವು ಪ್ರವಾಸೋದ್ಯಮವನ್ನು ಸಂಪೂರ್ಣವಾಗಿ ಆರಂಭಿಸಿಲ್ಲ. ದೀಪಾವಳಿ ಹಬ್ಬದ ನಂತರ ಈ ಕುರಿತು ನಿರ್ಣಯ ತೆಗೆದುಕೊಳ್ಳಲಾಗುವುದು. ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಜನರು ಕೋವಿಡ್ ನಿಯಮಾವಳಿಗಳನ್ನು ಖಡ್ಡಾಯವಾಗಿ ಪಾಲನೆ ಮಾಡಿ ಹಬ್ಬವನ್ನು ಆಚರಿಸಬೇಕು. ಕರ್ಫ್ಯೂ ಸಂದರ್ಭದಲ್ಲಿ ರಾಜ್ಯದ ಜನತೆ ಉತ್ತಮ ಸಹಕಾರ ನೀಡಿದ್ದಾರೆ, ಇನ್ನು ಮುಂದೆಯೂ ಕೂಡ ಜನತೆ ಸಹಕಾರ ನೀಡಬೇಕು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮನವಿ ಮಾಡಿದ್ದಾರೆ.