HEALTH TIPS

ಅಸ್ಸಾಂ: 1,400 ಮನೆಗಳ ತೆರವು, ಏಳು ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರು

                 ಧೋಲ್ಪುರ: ಸರ್ವಾನಂದ ಸೋನೊವಾಲ್‌ ನೇತೃತ್ವದ ಬಿಜೆಪಿ ಸರ್ಕಾರ ಸೇರಿದಂತೆ ಅಸ್ಸಾಂ ಸರ್ಕಾರಗಳು ದರಂಗ್‌ ಜಿಲ್ಲೆಯ ಸಿಪಜ್ಹರ್‌ ಗ್ರಾಮದ ಜನರಿಗಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದವು. ಈಗ ಅದೇ ಜನರ ವಿರುದ್ಧ ಸರ್ಕಾರ, ಒತ್ತುವರಿ ಜಮೀನು ತೆರವು ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

             'ಧೋಲ್ಪುರ I, II ಮತ್ತುIII ನೇ ವರ್ಗಗಳ ಗ್ರಾಮಗಳ ಸ್ಥಳಾಂತರಗೊಂಡಿರುವ ಜನರಿಗಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಮೂಲಕ ಅವರ ನೆಲೆಯನ್ನು ನ್ಯಾಯಸಮ್ಮತಗೊಳಿಸಲಾಯಿತು. ಈಗ ಅದೇ ಜನರನ್ನು ಅತಿಕ್ರಮಣಕಾರರು ಎಂದು ಹೇಳಲಾಗುತ್ತಿದೆ' ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

            ಬ್ರಹ್ಮಪುತ್ರಾ ನದಿ ತೀರದ ಮೂರು ಗ್ರಾಮಗಳಿಗೆ ಪಿಟಿಐ ವರದಿಗಾರರು ಭೇಟಿ ನೀಡಿದ ವೇಳೆ ಕೇಂದ್ರ ಸರ್ಕಾರದ 'ಸ್ವಚ್ಛ ಭಾರತ ಮಿಷನ್‌' ಅಡಿಯಲ್ಲಿ ತಮ್ಮ ಗ್ರಾಮಗಳಲ್ಲಿ ನಿರ್ಮಿಸಲಾದ ಶೌಚಾಲಯಗಳನ್ನು ಗ್ರಾಮಸ್ಥರು ವರದಿಗಾರರಿಗೆ ತೋರಿಸಿದರು.

            'ಇಲ್ಲಿನ ಜನರಿಗೆ ಶಾಶ್ವತ ವಿಳಾಸದೊಂದಿಗೆ ಆಧಾರ್‌ ಕಾರ್ಡ್‌ ಪೂರೈಸುವ ನಿಟ್ಟಿನಲ್ಲಿ ಸರ್ಕಾರವು ಐದು ಆಧಾರ್‌ ಕೇಂದ್ರಗಳನ್ನು ನಿರ್ಮಿಸಿವೆ. ಆದರೆ ಸರ್ಕಾರಕ್ಕೆ ಇದೇ ನಾಗರಿಕರು ಈಗ ಅತಿಕ್ರಮಣಕಾರಿಗಳು ಆಗಿದ್ದಾರೆ' ಎಂದು ಸ್ಥಳೀಯರು ತಿಳಿಸಿದರು.

           ಆದರೆ ದರಂಗ್‌ ಜಿಲ್ಲಾಡಳಿತ, ಇದು ಹಿಂದಿನ ಸರ್ಕಾರ ಸ್ಥಾಪಿಸಿದ ಕೇಂದ್ರಗಳಾಗಿವೆ, ಅವುಗಳನ್ನು ನಿಯಮಗಳಿಗನುಸಾರ ಸ್ಥಳಾಂತರಿಸಲಾಗುವುದು ಎಂದು ಹೇಳಿದೆ.

            'ಕಳೆದ ಎರಡು ವಾರಗಳಲ್ಲಿ ಸುಮಾರು 1,200-1,400 ಮನೆಗಳನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ 7,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ' ಎಂದು ವಿವಿಧ ಮೂಲಗಳು ಹೇಳಿವೆ.

'1983ರ ಬಳಿಕ ನಮ್ಮನ್ನು ಸಂಕಷ್ಟಗೊಳಗಾದ ಪೀಡಿತ ಜನರು ಎಂದು ಗುರುತಿಸಿದ ಸರ್ಕಾರವು ಅಸ್ಸಾಂನ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಿತು. ಬಳಿಕ, ನಮಗೆ ವಿದ್ಯುತ್‌ ಸಂಪರ್ಕವನ್ನೂ ಕಲ್ಪಿಸಿತು' ಎಂದು ಸಫರ್‌ ಆಲಿ ಎಂಬವರು ವರದಿಗಾರರಿಗೆ ಮಾಹಿತಿ ನೀಡಿದರು.

        '‍ಇಲ್ಲಿ ಸರ್ಕಾರವು ಪ್ರಧಾನ ಮಂತ್ರಿ ಗ್ರಾಮೀಣ ಅವಾಜ್‌ ಯೋಜನೆಯಡಿ(ಪಿಎಂಜಿಎವೈ) ಹಲವು ಮನೆಗಳನ್ನು ನಿರ್ಮಿಸಿತು. ನಮ್ಮ ಮನೆಗಳಿಗೆ ಸೌರಶಕ್ತಿ, ಶೌಚಾಲಯ ಸೌಲಭ್ಯ ಕಲ್ಪಿಸತು. ಈ ಬೆಳವಣಿಗಳೆಲ್ಲವೂ ಬಿಜೆಪಿ ಸರ್ಕಾರದಡಿಯೇ ನಡೆದಿದ್ದವು. ಆದರೂ, ಈಗ ಇಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ' ಎಂದು ಅವರು ದೂರಿದರು.

         'ಒಂದು ವೇಳೆ ನಾವು ಇಲ್ಲಿ ಅಕ್ರಮವಾಗಿ ವಾಸವಾಗಿದ್ದರೇ ಸರ್ಕಾರ ಈ ಸೌಲಭ್ಯಗಳನ್ನು ಏಕೆ ನೀಡಿತು' ಎಂದು ಅವರು ಪ್ರಶ್ನಿಸಿದರು.

         'ಒತ್ತುವರಿ ಪ್ರದೇಶದಲ್ಲಿ ಮೂರು ಆರೋಗ್ಯ ಕೇಂದ್ರಗಳು, 38 ಕಿರಿಯ ಪ್ರಾಥಮಿಕ ಶಾಲೆಗಳು, ಎರಡು ಎಂಇ ಶಾಲೆಗಳು, 42 ಅಂಗನವಾಡಿ ಕೇಂದ್ರಗಳು ಮತ್ತು 13 ನ್ಯಾಯಬೆಲೆ ಅಂಗಡಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಸರ್ಕಾರಿ ಸೌಲಭ್ಯಗಳು ಇವೆ' ಎಂದು ಧೋಲ್ಪುರದ ನಿವಾಸಿ ಫೈಜುರ್ ರೆಹಮಾನ್ ಹೇಳಿದರು.

           'ನಾಲ್ಕು ಮಸೀದಿಗಳು, ಎರಡು ಮದರಸಾಗಳು, ಒಂದು ಸಾರ್ವಜನಿಕ ಸ್ಮಶಾನ ಮತ್ತು 10 ಕ್ಕೂ ಹೆಚ್ಚು ವೈಯಕ್ತಿಕ ಸ್ಮಶಾನಗಳನ್ನು ಅಧಿಕಾರಿಗಳು ನೆಲಸಮ ಮಾಡಿದ್ದಾರೆ. ನಮ್ಮ ಧಾರ್ಮಿಕ ನಂಬಿಕೆಯನ್ನು ಸರ್ಕಾರ ಏಕೆ ಪದೇ ಪದೇ ಗುರಿಯಾಗಿಸುತ್ತಿದೆ?' ಎಂದು ಸಫರ್‌ ಆಲಿ ಪ್ರಶ್ನಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries