ಕಾಸರಗೋಡು: ಅಪರ ಜಿಲ್ಲಾಧಿಕಾರಿ ಡಿ.ಎಸ್. ಮೇಘಶ್ರೀ ನೇತೃತ್ವದಲ್ಲಿ ಕಾಞಂಗಾಡು ಲೋಕೋಪಯೋಗಿ ಇಲಾಖೆ ವಿಶ್ರಾಂತಿಗೃಹದಲ್ಲಿ ನಡೆದ ಅದಾಲತ್‍ನಲ್ಲಿ 14 ದೂರುಗಳಿಗೆ ಪರಿಹಾರ ಕಂಡುಕೊಳಖ್ಳಲಾಯಿತು. ತಂದೆ-ತಾಯಂದಿರು ಹಾಗೂ ಹಿರಿಯ ನಾಗರಿಕರ ಸಂರಕ್ಷಣೆ ಹಾಗೂ ಕಲ್ಯಾಣಕ್ಕಾಗಿ 2007ರ ಕಾಯ್ದೆಯನ್ವಯ ಈ ಅದಾಲತ್ ಆಯೋಜಿಸಲಾಗಿತ್ತು.
ಕಾಸರಗೋಡು ಅಪರ ಜಿಲ್ಲಾಧಿಕಾರಿ ಡಿ.ಎಸ್ ಮೇಘಶ್ರೀ ಅದಾಲತ್ ಉದ್ಘಾಟಿಸಿದರು. ಒಟ್ಟು 23ದೂರುಗಳು ಲಭ್ಯವಾಗಿದ್ದು, ಉಳಿದ ದೂರುಗಳಿಗೆ ವಿವಿಧ ಇಲಾಖೆಗಳ ಅಭಿಪ್ರಾಯಪಡೆದು, ಪರಿಹಾರ ಕಲ್ಪಿಸಲು ತೀರ್ಮಾನಿಸಲಾಯಿತು. ಜಿಲ್ಲಾ ಸಾಮಾಜಿಕ ಕಾನೂನು ಅಧಿಕಾರಿ ಶೀಬಾ ಮುಮ್ತಾಜ್ ಅಧ್ಯಕ್ಷತೆ ವಹಿಸಿದ್ದರು.