HEALTH TIPS

ಆಗಸ್ಟ್‌ನಲ್ಲಿ 15 ಲಕ್ಷಕ್ಕೂ.ಅಧಿಕ ಭಾರತೀಯರಿಗೆ ಉದ್ಯೋಗ ನಷ್ಟ

                  ನವದೆಹಲಿ :ಕಳೆದ ಆಗಸ್ಟ್ ತಿಂಗಳಿನಲ್ಲಿ ಔಪಚಾರಿಕ ಮತ್ತು ಅನೌಪಚಾರಿಕ ಕ್ಷೇತ್ರಗಳಲ್ಲಿ 15 ಲಕ್ಷಕ್ಕೂ ಅಧಿಕ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ)ಯ ಅಂಕಿಅಂಶಗಳು ತೋರಿಸಿವೆ.

           ಜುಲೈನಲ್ಲಿ ಸುಮಾರು 39.938 ಕೋಟಿಗಳಷ್ಟಿದ್ದ ಒಟ್ಟು ಉದ್ಯೋಗಿಗಳ ಸಂಖ್ಯೆ ಆಗಸ್ಟ್‌ನಲ್ಲಿ 39.778 ಕೋಟಿಗೆ ಕುಸಿದಿದೆ. ಗ್ರಾಮೀಣ ಭಾರತವೊಂದರಲ್ಲಿಯೇ 13 ಲಕ್ಷ ಉದ್ಯೋಗಗಳು ನಷ್ಟಗೊಂಡಿರುವುದು ಗಮನಾರ್ಹವಾಗಿದೆ.

          ರಾಷ್ಟ್ರೀಯ ನಿರುದ್ಯೋಗ ದರವೂ ತೀವ್ರವಾಗಿ ಹೆಚ್ಚಳಗೊಂಡಿದೆ. ಜುಲೈನಲ್ಲಿ ಶೇ.6.95ರಷ್ಟಿದ್ದ ಅದು ಆಗಸ್ಟ್‌ನಲ್ಲಿ ಶೇ.8.32ಕ್ಕೆ ಏರಿಕೆಯಾಗಿದೆ ಎಂದು ಸಿಎಂಐಇ ತನ್ನ ವರದಿಯಲ್ಲಿ ಹೇಳಿದೆ.

ನಗರ ನಿರುದ್ಯೋಗ ದರ ಜುಲೈನಲ್ಲಿ ಶೇ.8.3ರಷ್ಟಿದ್ದುದು ಆಗಸ್ಟ್‌ನಲ್ಲಿ ಶೇ.9.78ಕ್ಕೇರಿದೆ. ಕೋವಿಡ್ ಎರಡನೇ ಅಲೆಯು ದೇಶವನ್ನು ಅಪ್ಪಳಿಸುವ ಮುನ್ನ ಮಾರ್ಚ್‌ನಲ್ಲಿ ಅದು ಶೇ.7.27ರಷ್ಟಿತ್ತು. ಜುಲೈನಲ್ಲಿ ಶೇ.6.34ರಷ್ಟಿದ್ದ ಗ್ರಾಮೀಣ ನಿರುದ್ಯೋಗ ದರವೂ ಆಗಸ್ಟ್‌ನಲ್ಲಿ ಶೇ.7.64ಕ್ಕೆ ಏರಿಕೆಯಾಗಿದೆ. ಮುಂಗಾರು ಋತುವಿನಲ್ಲಿ ನಿಧಾನ ಬೆಳೆ ಬಿತ್ತನೆಯಾಗಿದ್ದು ಇದಕ್ಕೆ ಮುಖ್ಯ ಕಾರಣವಾಗಿದೆ.

ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಿದ್ದು ನಿರುದ್ಯೋಗ ದರ ಏರಿಕೆಗೆ ಕಾರಣವಾಗಿದೆ ಎಂದು ಸಿಎಂಐಇ ಆಡಳಿತ ನಿರ್ದೇಶಕ ಮಹೇಶ ವ್ಯಾಸ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಕನಿಷ್ಠ ಕೆಲವು ತಿಂಗಳಾದರೂ ಉದ್ಯೋಗ ಬಿಕ್ಕಟ್ಟು ಮುಂದುವರಿಯಲಿದೆ ಎಂದು ಹೇಳಿದ ಕಾರ್ಮಿಕ ಆರ್ಥಿಕ ತಜ್ಞ ಕೆ.ಆರ್.ಶ್ಯಾಮಸುಂದರ ಅವರು,ಔಪಚಾರಿಕ ಕ್ಷೇತ್ರಗಳು ಹೆಚ್ಚಿನ ಭರವಸೆಯನ್ನು ಮೂಡಿಸದಿದ್ದರೆ ಗುಣಮಟ್ಟದ ಉದ್ಯೋಗಗಳ ಚೇತರಿಕೆಯು ಸಮಯವನ್ನು ತೆಗೆದುಕೊಳ್ಳಲಿದೆ ಎಂದರು.

          ಕಾರ್ಮಿಕ ವರ್ಗದ ಪಾಲ್ಗೊಳ್ಳುವಿಕೆ ದರವು ಆಗಸ್ಟ್‌ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದ್ದು,ಇದು ಹೆಚ್ಚು ಜನರು ಸಕ್ರಿಯವಾಗಿ ಉದ್ಯೋಗ ಹುಡುಕಾಟದಲ್ಲಿ ತೊಡಗಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ ಎಂದೂ ಸಿಎಂಐಇ ವರದಿಯು ತಿಳಿಸಿದೆ.

           ನಿರುದ್ಯೋಗ ದರ ಏರಿಕೆಗಾಗಿ ಶುಕ್ರವಾರ ಬಿಜೆಪಿ ಸರಕಾರವನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಮೋದಿ ಸರಕಾರವು ಉದ್ಯೋಗಕ್ಕೆ ಹಾನಿಕಾರಕವಾಗಿದೆ. ಅದು ತನ್ನ ಸ್ನೇಹಿತರಿಗೆ ಸೇರಿರದ ಯಾವುದೇ ಉದ್ಯಮ ಅಥವಾ ಉದ್ಯೋಗವನ್ನು ಉತ್ತೇಜಿಸುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ,ಬದಲಿಗೆ ಉದ್ಯೋಗಗಳನ್ನು ಹೊಂದಿರುವವರಿಂದ ಅವುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಟ್ವೀಟಿಸಿದ್ದಾರೆ.

          ಭಾರತದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದು ಸರಕಾರವು ಹೇಳಿದೆಯಾದರೂ ದಿಲ್ಲಿ,ಹರ್ಯಾಣ ಮತ್ತು ರಾಜಸ್ಥಾನ ಸೇರಿದಂತೆ ಕನಿಷ್ಠ ಎಂಟು ರಾಜ್ಯಗಳು ಈಗಲೂ ಎರಡಂಕಿಯ ನಿರುದ್ಯೋಗ ದರಗಳನ್ನು ವರದಿ ಮಾಡುತ್ತಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries