ತಿರುವನಂತಪುರಂ: ರಾಜ್ಯದಲ್ಲಿ ಇಂದು 15,768 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ತ್ರಿಶೂರ್ 1843, ಕೊಟ್ಟಾಯಂ 1632, ತಿರುವನಂತಪುರ 1591, ಎರ್ನಾಕುಳಂ 1545, ಪಾಲಕ್ಕಾಡ್ 1419, ಕೊಲ್ಲಂ 1407, ಮಲಪ್ಪುರಂ 1377, ಅಲಪ್ಪುಳ 1250, ಕೋಝಿಕ್ಕೋಡ್ 1200, ಕಣ್ಣೂರು 993, ಪತ್ತನಂತಿಟ್ಟ 715, ಇಡುಕ್ಕಿ 373, ವಯನಾಡ್ 237 ಮತ್ತು ಕಾಸರಗೋಡು 186 ಎಂಬಂತೆ ಸೋಂಕು ವರದಿಯಾಗಿದೆ.
ಕಳೆದ 24 ಗಂಟೆಗಳಲ್ಲಿ 1,05,513 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆಯ ಅನುಪಾತವು ಎಂಟಕ್ಕಿಂತ ಹೆಚ್ಚಿನ 678 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ 2507 ವಾರ್ಡ್‍ಗಳಿವೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,86,600 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಇವರಲ್ಲಿ 4,62,691 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 23,909 ಮಂದಿ ಆಸ್ಪತ್ರೆಯ ಮೇಲ್ವಿಚಾರಣೆಯಲ್ಲಿದ್ದಾರೆ. 1676 ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರಸ್ತುತ, 1,61,195 ಕೋವಿಡ್ ಪ್ರಕರಣಗಳಲ್ಲಿ, ಕೇವಲ 13.7 ಪ್ರತಿಶತದಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.
ಇಂದು, ಕೋವಿಡ್ ಬಾಧಿಸಿ 214 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 23,897 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 124 ಮಂದಿ ಹೊರ ರಾಜ್ಯದಿಂದ ಬಂದವರು. ಸಂಪರ್ಕದ ಮೂಲಕ ಒಟ್ಟು 14,746 ಮಂದಿ ಜನರಿಗೆ ಸೋಂಕು ತಗುಲಿದೆ. 798 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಸುಮಾರು 100 ಮಂದಿ ಆರೋಗ್ಯ ಕಾರ್ಯಕರ್ತರು ಸೋಂಕು ಬಾಧಿತರಾಗಿದ್ದಾರೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 21,367 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1657, ಕೊಲ್ಲಂ 1431, ಪತ್ತನಂತಿಟ್ಟ 1206, ಆಲಪ್ಪುಳ 1104, ಕೊಟ್ಟಾಯಂ 1460, ಇಡುಕ್ಕಿ 803, ಎರ್ನಾಕುಳಂ 2712, ತ್ರಿಶೂರ್ 2448, ಪಾಲಕ್ಕಾಡ್ 1429, ಮಲಪ್ಪುರಂ 2591, ಕೋಝಿಕ್ಕೋಡ್ 2508, ವಯನಾಡ್ 801, ಕಣ್ಣೂರು 752 ಮತ್ತು ಕಾಸರಗೋಡು 465 ಗುಣಮುಖರಾಗಿದ್ದಾರೆ. ಇದರೊಂದಿಗೆ, 1,61,195 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 43,54,264 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.