ಕಾಸರಗೋಡು: ಸಾಮಾಜಿಕ, ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ 15ನೇ ವಾರ್ಷಿಕೋತ್ಸವ ಹಾಗೂ ರಂಗಚಿನ್ನಾರಿ ವಾರ್ಷಿಕ ಪ್ರಶಸ್ತಿ ಪ್ರದಾನ ಇಂದು ಶ್ರೀಮದ್ ಎಡನೀರು ಮಠದ ಆವರಣದಲ್ಲಿ ನಡೆಯಲಿದೆ.
ಬೆಳಿಗ್ಗೆ 10.45 ರಿಂದ ಆರಂಭಗೊಳ್ಳುವ ಸಮಾರಂಭವನ್ನು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ದೀಪ ಬೆಳಗಿಸಿ ಚಾಲನೆ ನೀಡುವರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಉಡುಪಿ ಶಾಸಕ ರಘುಪತಿ ಭಟ್, ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಡಾ.ಟಿ.ಶಾಮ ಭಟ್, ಸಾಮಾಜಿಕ ಕಾರ್ಯಕರ್ತ ಮಹೇಶ್ ಠಾಕೂರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಮಾರಂಭದಲ್ಲಿ ಸಂಗೀತ ಕಲಾವಿದ ವಿದ್ವಾನ್.ಯೋಗೀಶ ಶರ್ಮ ಬಳ್ಳಪದವು, ಸಾಹಿತಿ ಡಾ.ಪಾರ್ವತಿ ಜಿ.ಐತಾಳ್ ಅವರಿಗೆ ದಿ.ಎನ್.ಆರ್.ಬೇಕಲ್ ಸ್ಮರಣಾರ್ಥ ನೀಡುವ ರಂಗಚಿನ್ನಾರಿ ಪ್ರಶಸ್ತಿ ಹಾಗೂ ಸಾಂಸ್ಕøತಿಕ ಯುವ ಸಾಧಕಿ ಶ್ರದ್ದಾ ಭಟ್ ನಾಯರ್ಪಳ್ಳ ಹಾಗೂ ಕ್ರೀಡಾ ಪ್ರತಿಭೆ ಶ್ರಾವ್ಯಾ ಸಿ.ಎಚ್.ಕನಿಯಾಲ ಅವರಿಗೆ ದಿ.ದೇರಪ್ಪ ಸ್ಮರಣಾರ್ಥ ರಂಗಚಿನ್ನಾರಿ ಯುವ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು. ಸಭಾ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ 9.30 ರಿಂದ ತಂತಿ ತರಂಗ ವಿಶೇಷ ಗಾಯನ ಕಾರ್ಯಕ್ರಮ ನಡೆಯಲಿದ್ದು, ಮಂಜೂರು ರಂಜಿತ್(ವಯಲಿನ್), ವೈಕೋಮ್ ಪ್ರಸಾದ್(ಮೃದಗಂ), ಮಂಜೂರ್ ಉಣ್ಣಿಕೃಷ್ಣನ್(ಘಟಂ) ವಾದನದಲ್ಲಿ ಕಾರ್ಯಕ್ರಮ ಮೂಡಿಬರಲಿದೆ.