ನವದೆಹಲಿ: ಕರೊನಾ ತಡೆ ಹಾಗೂ ನಿಯಂತ್ರಣ ಸಲುವಾಗಿ ದೇಶದಲ್ಲಿ ಬೃಹತ್ ಲಸಿಕಾ ಅಭಿಯಾನ ನಡೆಯುತ್ತಿದ್ದು, ಲಸಿಕೆ ನೀಡಿಕೆ ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲೇ ನಡೆಯುತ್ತಿದೆ. ದೇಶದಲ್ಲಿ ಇದುವರೆಗಿನ ಲಸಿಕೀಕರಣ ಯಾವ ಪ್ರಮಾಣದಲ್ಲಿ ನಡೆದಿದೆ ಎಂಬ ಕುರಿತು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಆಗಸ್ಟ್ ತಿಂಗಳೊಂದರಲ್ಲೇ ದೇಶದಲ್ಲಿ 18.38 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ದಿನವೊಂದಕ್ಕೆ ಸರಾಸರಿ 59.29 ಡೋಸ್ ಲಸಿಕೆ ನೀಡಿದಂತಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಇನ್ನು ಒಟ್ಟಾರೆ ಜನಸಂಖ್ಯೆಯ ಪ್ರಮಾಣದಲ್ಲಿ ಹೇಳುವುದಾದರೆ ದೇಶದ ಜನಸಂಖ್ಯೆಯ ವಯಸ್ಕರಲ್ಲಿ ಶೇ. 16 ಮಂದಿಗೆ ಎರಡೂ ಡೋಸ್ ಲಸಿಕೆ ಕೊಟ್ಟಂತಾಗಿದ್ದು, ಶೇ. 54 ವಯಸ್ಕರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಂತಾಗಿದೆ ಎಂದೂ ಅವರು ತಿಳಿಸಿದ್ದಾರೆ.