ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ.ಯು.ಪಿ ಶಾಲೆಯ ಸಂಚಾಲಕರಾಗಿದ್ದ ದಿ.ರಾಮಕೃಷ್ಣ ರಾವ್ ಅವರ 16ನೇ ಸಂಸ್ಮರಣಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಗೋಪಾಲಕೃಷ್ಣ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಉದಯಕುಮಾರ್ ನೂಜಿ ವ್ಯವಸ್ಥಾಪಕರು ಸಾಯಿನಿಕೇತನ ಸೇವಾಶ್ರಮ ದೈಗೋಳಿ ಭಾಗವಹಿಸಿ ‘ಶಿಕ್ಷಣಕ್ಕಾಗಿ ಎಲ್ಲವನ್ನೂ ಧಾರೆ ಎರೆದ ಹಿರಿಯ ಚೇತನ’ ರಾಮಕೃಷ್ಣರಾಯರ ಸೇವಾ ದೃಷ್ಟಿಯನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ದಿನೇಶ್ ವಿ ಉಪಜಿಲ್ಲಾ ವಿದ್ಯಾಧಿಕಾರಿಗಳು ಮಂಜೇಶ್ವರ ಡಾ. ಪ್ರಭಾಕರ್ ರೈ ಆರೋಗ್ಯ ಅಧಿಕಾರಿ ಮೀಂಜ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಪೂರ್ವ ವಿದ್ಯಾರ್ಥಿ ರಮೇಶ ಕೌಡೂರು ಇವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಮೀಂಜ ಗ್ರ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಶಾಲಾ ಸಂಚಾಲಕಿ ರಾಜೇಶ್ವರಿ ಎಸ್ ರಾವ್ ಮತ್ತು ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಉಪಸ್ಥಿತರಿದ್ದರು. ಶಾಲಾ ಆಡಳಿತ ಸಲಹೆಗಾರ ಶ್ರೀಧರ ರಾವ್ ಆರ್. ಎಮ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸೌಮ್ಯ ಟೀಚರ್ ನಿರೂಪಣೆಗೈದರು. ಪದ್ಮಾವತಿ ಟೀಚರ್ ವಂದಿಸಿದರು.