HEALTH TIPS

ರಾಜ್ಯದಲ್ಲಿ ಇಂದು 17,983 ಮಂದಿಗೆ ಕೋವಿಡ್ ಪತ್ತೆ: 1,10,523 ಮಾದರಿಗಳ ಪರೀಕ್ಷೆ: ಪರೀಕ್ಷಾ ಧನಾತ್ಮಕ ದರ ಶೇ.16.27

                          

          ತಿರುವನಂತಪುರಂ: ಕೇರಳದಲ್ಲಿ ಇಂದು 17,983 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ತ್ರಿಶೂರ್ 2784, ಎರ್ನಾಕುಳಂ 2397, ತಿರುವನಂತಪುರ 1802, ಕೊಲ್ಲಂ 1500, ಕೊಟ್ಟಾಯಂ 1367, ಕೋಝಿಕ್ಕೋಡ್ 1362, ಪಾಲಕ್ಕಾಡ್ 1312, ಮಲಪ್ಪುರಂ 1285, ಆಲಪ್ಪುಳ 1164, ಇಡುಕ್ಕಿ 848, ಕಣ್ಣೂರು 819, ಪತ್ತನಂತಿಟ್ಟ 759, ವಯನಾಡ್ 338 ಮತ್ತು ಕಾಸರಗೋಡು 246 ಎಂಬಂತೆ ಸೋಂಕು ದೃಢಪಟ್ಟಿದೆ. 

          ಕಳೆದ 24 ಗಂಟೆಗಳಲ್ಲಿ 1,10,523 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ 10 ಕ್ಕಿಂತ 422 ಸ್ಥಳೀಯ ಸಂಸ್ಥೆಗಳಲ್ಲಿ 841 ವಾರ್ಡ್‍ಗಳನ್ನು ಒಳಗೊಂಡಿದೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.

           ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,69,954 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,47,442 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 22,512 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 1807 ಮಂದಿ ಜನರು ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

       ಪ್ರಸ್ತುತ, 1,62,846 ಕೋವಿಡ್ ಪ್ರಕರಣಗಳಲ್ಲಿ, ಶೇಕಡಾ 12.6 ರಷ್ಟು ಜನರು ಮಾತ್ರ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

            ಸೋಂಕು ಬಾಧಿಸಿ ಇಂದು 127 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 24,318 ಕ್ಕೆ ಏರಿಕೆಯಾಗಿದೆ. ಸೋಂಕು ಪತ್ತೆಯಾದವರಲ್ಲಿ 72 ಮಂದಿ ಜನರು ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 16,918 ಮಂದಿ ಜನರು ಸೋಂಕಿಗೆ ಒಳಗಾಗಿದ್ದಾರೆ. 877 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 116 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. 

         ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 15,054 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 2422, ಕೊಲ್ಲಂ 538, ಪತ್ತನಂತಿಟ್ಟ 187, ಅಲಪ್ಪುಳ 1303, ಕೊಟ್ಟಾಯಂ 1216, ಇಡುಕ್ಕಿ 372, ಎರ್ನಾಕುಳಂ 614, ತ್ರಿಶೂರ್ 2587, ಪಾಲಕ್ಕಾಡ್ 1064, ಮಲಪ್ಪುರಂ 1366, ಕೋಝಿಕ್ಕೋಡ್ 1540, ವಯನಾಡ್ 442, ಕಣ್ಣೂರು 1068 ಮತ್ತು ಕಾಸರಗೋಡು 335 ಗುಣಮುಖರಾಗಿದ್ದಾರೆ. ಇದರೊಂದಿಗೆ, 1,62,846 ಮಂದಿ ಜನರಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಅವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 44,09,530 ಮಂದಿ ಈವರೆಗೆ ಕೋವಿಡ್ ನಿಂದ ಮುಕ್ತರಾಗಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries