HEALTH TIPS

ಡೆಲ್ಟಾ ಕೊರೊನಾ ರೂಪಾಂತರ 185 ದೇಶಗಳಲ್ಲಿ ಪತ್ತೆ; WHO

              ನವದೆಹಲಿ: ಕೊರೊನಾ ಸೋಂಕಿನ ಡೆಲ್ಟಾ ರೂಪಾಂತರ ಜಾಗತಿಕವಾಗಿ ಪ್ರಧಾನವಾಗಿದೆ. ಇತರೆ ಎಲ್ಲಾ ರೂಪಾಂತರಗಳಿಗಿಂತ ಇದು ಬಲಿಷ್ಠವಾಗಿದ್ದು, ಇದುವರೆಗೂ 185 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಮಾಹಿತಿ ನೀಡಿದೆ.

                 ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಮಿತಿ ಮುಖ್ಯಸ್ಥರಾದ ಮರಿಯಾ ವಾನ್ ಕೆರ್ಖೋವ್ ಈ ಕುರಿತು ಮಾಹಿತಿ ನೀಡಿದ್ದಾರೆ. 'ಡೆಲ್ಟಾ ರೂಪಾಂತರ ಮತ್ತಷ್ಟು ಬಲಿಷ್ಠವಾಗಿದೆ. ಆಲ್ಫಾ, ಬೆಟಾ ಹಾಗೂ ಗಾಮಾ ರೂಪಾಂತರಗಳಿಗೆ ಹೋಲಿಸಿದರೆ ಅಧಿಕ ಶಕ್ತಿಶಾಲಿಯಾಗಿದೆ. ಹೆಚ್ಚು ವೇಗವಾಗಿ ಹರಡುತ್ತಿದೆ ಕೂಡ. ಇತರೆ ವೈರಸ್‌ಗಳನ್ನೂ ಹಿಮ್ಮೆಟ್ಟಿ ಈ ರೂಪಾಂತರ ಪಸರಿಸುತ್ತಿದೆ' ಎಂದು ಹೇಳಿದ್ದಾರೆ.


             ಇದುವರೆಗೂ ಈ ರೂಪಾಂತರ 185 ದೇಶಗಳನ್ನು ಆವರಿಸಿದೆ ಎಂದು ತಿಳಿಸಿದ್ದಾರೆ. ರೋಗ ನಿಯಂತ್ರಣ ಹಾಗೂ ನಿರ್ಮೂಲನಾ ಕೇಂದ್ರದ ಪ್ರಕಾರ, ಡೆಲ್ಟಾ ರೂಪಾಂತರ ಹೆಚ್ಚು ಸಾಂಕ್ರಾಮಿಕವಾಗಿದೆ. ಹಿಂದಿನ ರೂಪಾಂತರಗಳಿಗಿಂತ ಎರಡು ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದ್ದು, ಕೊರೊನಾ ಲಸಿಕೆ ಪಡೆದುಕೊಳ್ಳದ ಜನರಿಗೆ ಹಿಂದಿನ ರೂಪಾಂತರಗಳಿಗಿಂತ ಈ ರೂಪಾಂತರ ತೀವ್ರತರ ಅನಾರೋಗ್ಯವನ್ನು ಉಂಟು ಮಾಡಬಹುದಾಗಿದೆ.

             2020ರ ಅಂತ್ಯದಲ್ಲಿ, ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಅಪಾಯ ಉಂಟುಮಾಡುವ ರೂಪಾಂತರಗಳ ಕುರಿತು ಎಚ್ಚರಿಕೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ರೂಪಾಂತರಗಳನ್ನು 'ಕಳವಳಕಾರಿ ರೂಪಾಂತರ' ಎಂದು ಪರಿಗಣಿಸಲು ಆರಂಭಿಸಿತು.ಸ

ಕಳವಳಕಾರಿಯಾದ ನಾಲ್ಕು ರೂಪಾಂತರಗಳಲ್ಲದೇ ಐದು ವಿವಿಧ ರೂಪಾಂತರಗಳು ಕೂಡ ಪತ್ತೆಯಾಗಿವೆ. ಅವುಗಳಲ್ಲಿ ಮೂರು- ಈಟಾ, ಲೊಟಾ, ಕಪ್ಪಾ ಈ ಮೂರು ರೂಪಾತರಗಳ ಮೇಲೆ ಸದ್ಯ ನಿಗಾ ಮುಂದುವರೆದಿದೆ ಎಂದು ಕೆರ್ಖೋವ್ ತಿಳಿಸಿದ್ದಾರೆ.

                 ಕೊರೊನಾ ಲಸಿಕೆ ಪಡೆದವರು ಹಾಗೂ ಲಸಿಕೆ ಪಡೆಯದವರು ಈ ಎರಡು ವರ್ಗಕ್ಕೂ ತಾಗಬಲ್ಲಷ್ಟು ಡೆಲ್ಟಾ ರೂಪಾಂತರ ಸೋಂಕು ಬಲಿಷ್ಠವಾಗಿದೆ ಎನ್ನಲಾಗಿದೆ. ಡೆಲ್ಟಾ ರೂಪಾಂತರ ಅಥವಾ B.1.617.2 ರೂಪಾಂತರದ ಹರಡುವಿಕೆ ಲಸಿಕೆ ಪಡೆದವರ ಹಾಗೂ ಪಡೆಯದ ಜನರಲ್ಲಿ ಭಿನ್ನವಾಗಿರುವುದಿಲ್ಲ. ಅತಿ ವೇಗವಾಗಿ ಹರಡಬಲ್ಲ ಡೆಲ್ಟಾ ರೂಪಾಂತರ ವಿಶ್ವಾದ್ಯಂತ ವ್ಯಾಪಿಸುತ್ತಿರುವ ಪ್ರಬಲ ತಳಿ ಎಂದು ಗುರುತಿಸಿಕೊಂಡಿದೆ. ಭಾರತದಲ್ಲಿ ಕೊರೊನಾ ಎರಡನೇ ಅಲೆ ಭೀಕರತೆಗೆ ಸಾಕ್ಷಿಯಾಗಿದೆ.

                ಭಾರತದಲ್ಲಿ ಮೊದಲು ಪತ್ತೆಯಾದ ಕೊರೊನಾ ಸೋಂಕಿನ ಡೆಲ್ಟಾ ರೂಪಾಂತರ ವಿಶ್ವದಲ್ಲೇ ಭಾರೀ ಆತಂಕ ಸೃಷ್ಟಿ ಮಾಡಿದೆ. ಹಲವಾರು ದೇಶಗಳಲ್ಲಿ ಕೊರೊನಾ ಸೋಂಕಿನ ಹೊಸ ಅಲೆಯ ಸೃಷ್ಟಿಗೆ ಡೆಲ್ಟಾ ರೂಪಾಂತರ ಕಾರಣವಾಗಿದೆ. ಅಮೆರಿಕ, ಬ್ರಿಟನ್, ಚೀನಾದಲ್ಲಿ ಡೆಲ್ಟಾ ಹಾವಳಿ ಮುಂದುವರೆದಿದೆ. ಮೂಲ ಕೊರೊನಾ ವೈರಸ್‌ಗಿಂತ ಡೆಲ್ಟಾ ರೂಪಾಂತರವು ಭಾರೀ ಪ್ರವಾವಶಾಲಿಯಾಗಿದೆ ಎಂದು ಚೀನಾ ಸಂಶೋಧಕರು ಹೇಳಿದ್ದಾರೆ.

             ಇದರೊಂದಿಗೆ, ಡೆಲ್ಟಾ ರೂಪಾಂತರ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಹೆಚ್ಚು ಎಂದು ಲ್ಯಾನ್ಸೆಟ್ ವರದಿ ಮಾಡಿದೆ.

                                Breakthrough ಸೋಂಕಿಗೆ ಕಾರಣ:

            ಇದುವರೆಗೂ ಭಾರತದಲ್ಲಿ ದಾಖಲಾಗಿರುವ ಪ್ರಗತಿ ಸೋಂಕಿನ ಪ್ರಕರಣಗಳಿಗೆ (Breakthrough infection) ಡೆಲ್ಟಾ ರೂಪಾಂತರ ಕಾರಣವಾಗಿವೆ. ಇವುಗಳ ಹೊರತಾಗಿ ಬೇರೆ ಯಾವುದೇ ರೂಪಾಂತರ ಪತ್ತೆಯಾಗಿಲ್ಲ ಎಂದು ಜೈವಿಕ ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋಂಕಿನ ವಿರುದ್ಧ ಹೋರಾಡಲು ಸಂಪೂರ್ಣ ಪ್ರಮಾಣದ ಕೊರೊನಾ ಲಸಿಕೆ ಪಡೆದುಕೊಂಡ ನಂತರವೂ ಮತ್ತೆ ಸೋಂಕು ಕಾಣಿಸಿಕೊಂಡರೆ ಅದನ್ನು breakthrough infection ಎಂದು ಕರೆಯಲಾಗುತ್ತದೆ. ಈ ಎಲ್ಲಾ ಪ್ರಗತಿ ಸೋಂಕಿಗೆ ಡೆಲ್ಟಾ ರೂಪಾಂತರವೇ ಕಾರಣ ಎಂಬುದು ಜೆನೋಮ್ ಸೀಕ್ವೆನ್ಸಿಂಗ್‌ನಲ್ಲಿ ಪತ್ತೆಯಾಗಿದೆ.

                ಜೀವಕೋಶಕ್ಕೆ ದಾಳಿ ಮಾಡಲು, ಹಾಗೆಯೇ ಪುನರುತ್ಪತ್ತಿಯಾಗುವಲ್ಲಿ ಡೆಲ್ಟಾ ಸೋಂಕು ಅತಿ ಸಮರ್ಥವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries