ನವದೆಹಲಿ: ಕೋವಿಡ್-19 ಸಂತ್ರಸ್ತರ ಕುಟುಂಬ ಸದಸ್ಯರಿಗೆ 50 ಸಾವಿರ ರೂ. ಕೃಪಾಧನ ನೀಡುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ ಡಿಎಂಎ) ಮಾರ್ಗಸೂಚಿಗಳ ಬಗ್ಗೆ ಸುಪ್ರೀಂ ಕೋರ್ಟ್ ಸಂತಸ ವ್ಯಕ್ತಪಡಿಸಿದೆ.
ಕೇಂದ್ರವನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಎನ್ ಡಿಎಂಎ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿ, ಏಕರೂಪತೆಯನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ರಾಜ್ಯಗಳಿಂದ ಎಸ್ ಡಿಆರ್ ಎಫ್ ಮೂಲಕ ಕೋವಿಡ್-19 ಸಂತ್ರಸ್ತರ ಕುಟುಂಬ ಸದಸ್ಯರಿಗೆ 50,000 ರೂಪಾಯಿ ನೀಡುವುದಕ್ಕೆ ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
"ನಾವು ಉಂಟಾಗಿರುವ ನಷ್ಟವನ್ನು ತುಂಬುವುದಕ್ಕೆ ಆಗುವುದಿಲ್ಲ. ಆದರೆ ಏನಾದರೂ ಮಾಡಬಹುದು" ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ನ್ಯಾ.ಎಂಆರ್ ಶಾ ಹಾಗೂ ನ್ಯಾ. ಎಎಸ್ ಬೋಪಣ್ಣ ಅವರಿದ್ದ ಪೀಠ, "ನಾವು ಇದರಿಂದ ಸಂತೋಷಗೊಂಡಿದ್ದೇವೆ. ಇದು ಹಲವು ಮಂದಿಗೆ ಸಾಂತ್ವನ ತುಂಬುತ್ತದೆ. ಹಲವರ ಕಣ್ಣೀರು ಒರೆಸುತ್ತದೆ ಎಂದು ಹೇಳಿದೆ.