ತಿರುವನಂತಪುರಂ: ರಾಜ್ಯದಲ್ಲಿ ಇಂದು 19,653 ಮಂದಿ ಜನರಿಗೆ ಕೋವಿಡ್ ದೃಢಪÀಟ್ಟಿದೆ. ಎರ್ನಾಕುಳಂ 2810, ತ್ರಿಶೂರ್ 2620, ತಿರುವನಂತಪುರ 2105, ಕೋಝಿಕ್ಕೋಡ್ 1957, ಪಾಲಕ್ಕಾಡ್ 1593, ಕೊಲ್ಲಂ 1392, ಮಲಪ್ಪುರಂ 1387, ಕೊಟ್ಟಾಯಂ 1288, ಆಲಪ್ಪುಳ 1270, ಕಣ್ಣೂರು 856, ಇಡುಕ್ಕಿ 843, ಪತ್ತನಂತಿಟ್ಟ 826, ವಯನಾಡ್ 443 ಮತ್ತು ಕಾಸರಗೋಡು 263 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 1,13,295 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆ ಅನುಪಾತ ಎಂಟಕ್ಕಿಂತ ಹೆಚ್ಚಿನ 678 ಸ್ಥಳೀಯ ಸಂಸ್ಥೆಗಳಲ್ಲಿ 2507 ವಾರ್ಡ್‍ಗಳಿವೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 5,12,854 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,87,587 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 25,267 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 1906 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಸ್ತುತ, 1,73,631 ಕೋವಿಡ್ ಪ್ರಕರಣಗಳಲ್ಲಿ, ಕೇವಲ 13.3 ಪ್ರತಿಶತದಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 152 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 23,591 ಕ್ಕೆ |ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 105 ಮಂದಿ ರಾಜ್ಯದ ಹೊರಗಿನಂದ ಬಂದವÀರು. 18,657 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 807 ಮಂದಿ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 84 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 26,711 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 2180, ಕೊಲ್ಲಂ 1349, ಪತ್ತನಂತಿಟ್ಟ 1117, ಅಲಪ್ಪುಳ 1414, ಕೊಟ್ಟಾಯಂ 1434, ಇಡುಕ್ಕಿ 1146, ಎರ್ನಾಕುಳಂ 5708, ತ್ರಿಶೂರ್ 2584, ಪಾಲಕ್ಕಾಡ್ 1450, ಮಲಪ್ಪುರಂ 2514, ಕೋಝಿಕ್ಕೋಡ್ 3065, ವಯನಾಡ್ 976, ಕಣ್ಣೂರು 1191 ಮತ್ತು ಕಾಸರಗೋಡು 483 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 1,73,631 ಮಂದಿ ಜನರಿಗೆ ಕೋವಿಡ್ ಇರುವುದು ಪತ್ತೆಯಾಗಿದ್ದು, ಅವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 43,10,674 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.