HEALTH TIPS

ರಾಜ್ಯದಲ್ಲಿ ಇಂದು 19,688 ಮಂದಿಗೆ ಕೋವಿಡ್ ಪತ್ತೆ: 28,561 ಮಂದಿ ಚೇತರಿಕೆ: ಪರೀಕ್ಷಾ ಧನಾತ್ಮಕ ದರ ಶೇ. 16.71

                                             

                   ತಿರುವನಂತಪುರಂ: ರಾಜ್ಯದಲ್ಲಿ ಇಂದು 19,688 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ತ್ರಿಶೂರ್ 3120, ಕೋಯಿಕ್ಕೋಡ್ 2205, ಎರ್ನಾಕುಳಂ 2029, ಮಲಪ್ಪುರಂ 1695, ಕೊಲ್ಲಂ 1624, ಪಾಲಕ್ಕಾಡ್ 1569, ತಿರುವನಂತಪುರ 1483, ಅಲಪ್ಪುಳ 1444, ಕಣ್ಣೂರು 1262, ಕೊಟ್ಟಾಯಂ 1020, ವಯನಾಡ್ 694, ಪತ್ತನಂತಿಟ್ಟ 670, ಇಡುಕ್ಕಿ 506 ಮತ್ತು ಕಾಸರಗೋಡು 367 ಎಂಬಂತೆ ಕೋವಿಡ್ ದೃಢಪಡಿಸಲಾಗಿದೆ. 

                     ಕಳೆದ 24 ಗಂಟೆಗಳಲ್ಲಿ 1,17,823 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ.16.71 ಆಗಿದೆ. ಇಲ್ಲಿಯವರೆಗೆ ಒಟ್ಟು 3,25,08,136 ಮಾದರಿಗಳನ್ನು ಪರೀಕ್ಷಿಸಲಾಗಿದೆ.

              ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತವು ಏಳಕ್ಕಿಂತ ಹೆಚ್ಚಿರುವ 296 ಸ್ಥಳೀಯ ಸಂಸ್ಥೆಗಳಿವೆ. ಇವುಗಳಲ್ಲಿ 81 ನಗರ ಪ್ರದೇಶಗಳಲ್ಲಿ ಮತ್ತು 215 ಗ್ರಾಮೀಣ ಪ್ರದೇಶಗಳಲ್ಲಿವೆ.

                 ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ  135 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 21,631 ಕ್ಕೆ ಏರಿಕೆಯಾಗಿದೆ. Àರುತ್ತದೆ.

      ಇಂದು, ಸೋಂಕು ಪತ್ತೆಯಾದವರಲ್ಲಿ 111 ಮಂದಿ ರಾಜ್ಯದ ಹೊರಗಿಂದ ಬಂದವರು. 18,602 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 894 ಮಂದಿಯ ಸಂಪರ್ಕ ಮೂಲಗಳು ಸ್ಪಷ್ಟವಾಗಿಲ್ಲ.

               ಇಂದು 81 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ. ವಯನಾಡ್ 17, ಪಾಲಕ್ಕಾಡ್ 10, ಪತ್ತನಂತಿಟ್ಟ, ಕಣ್ಣೂರು 9, ತ್ರಿಶೂರ್ 8, ಕಾಸರಗೋಡು 7, ಕೊಲ್ಲಂ, ಕೊಟ್ಟಾಯಂ, ಎರ್ನಾಕುಳಂ ತಲಾ 5, ಆಲಪ್ಪುಳ 4 ಮತ್ತು ತಿರುವನಂತಪುರ 2 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. 

              ಒಟ್ಟು 28,561 ಮಂದಿ ಜನರಿರು ಚೇತರಿಸಿಕೊಂಡಿದ್ದಾರೆ. ತಿರುವನಂತಪುರ 2085, ಕೊಲ್ಲಂ 2640, ಪತ್ತನಂತಿಟ್ಟ 1358, ಆಲಪ್ಪುಳ 1836, ಕೊಟ್ಟಾಯಂ 2555, ಇಡುಕ್ಕಿ 766, ಎರ್ನಾಕುಳಂ 2842, ತ್ರಿಶೂರ್ 2528, ಪಾಲಕ್ಕಾಡ್ 2122, ಮಲಪ್ಪುರಂ 3144, ಕೋಳಿಕ್ಕೋಡ್ 3439, ವಯನಾಡ್ 974, ಕಣ್ಣೂರು 1743 ಮತ್ತು ಕಾಸರಗೋಡು 529 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 2,38,782 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು,  ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 39,66,557 ಮಂದಿ ಜನರನ್ನು ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

                   ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 6,20,739 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 5,87,582 ಮಂದಿ ಜನರು ಮನೆ / ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 33,157 ಮಂದಿ ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿದ್ದಾರೆ. ಒಟ್ಟು 2,463 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries