ತಿರುವನಂತಪುರಂ: ಕೇರಳದಲ್ಲಿ ಶೀಘ್ರ ಶಾಲಾರಂಭಕ್ಕೆ ತೊಡಗಿಸುವಿಕೆಗೆ ಚಾಲನೆ ನೀಡಲು ಸೂಚನೆಗಳು ವ್ಯಕ್ತವಾಗಿವೆ. ಕೋವಿಡ್ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶಾಲೆಗಳು ನವೆಂಬರ್‍ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ದಿನಾಂಕವನ್ನು ಮುಖ್ಯಮಂತ್ರಿಯವರು ಇನ್ನಷ್ಟ|ಏ ಘೋಷಿಸಬೇಕಿದೆ. ಕೋವಿಡ್ ವಿಸ್ತರಣೆಯ ಬಳಿಕ ಮುಚ್ಚಿದ ಶಾಲೆಗಳು ಒಂದೂವರೆ ವರ್ಷದ ನಂತರ ಮತ್ತೆ ತೆರೆಯಲ್ಪಡುತ್ತವೆ. ಈ ಹಿಂದೆ ಅಕ್ಟೋಬರ್ 4 ರಂದು ಕಾಲೇಜುಗಳನ್ನು ತೆರೆಯಲು ನಿರ್ಧರಿಸಲಾಗಿತ್ತು. ಶಾಲಾರಂಭಕ್ಕೆ ಸಿದ್ಧತೆಗಾಗಿ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
ಶಾಲೆಗಳನ್ನು ತೆರೆಯುವ ವಿಷಯ ಚರ್ಚೆಯಲ್ಲಿದೆ ಎಂದು ಸ್ವತಃ ಮುಖ್ಯಮಂತ್ರಿಗಳು ಕಳೆದ ವಾರ ಸ್ಪಷ್ಟಪಡಿಸಿದ್ದರು. ಸರ್ಕಾರವು ಆರೋಗ್ಯ ತಜ್ಞರೊಂದಿಗೆ ಈ ಸಮಸ್ಯೆಯನ್ನು ಚರ್ಚೆ ನಡೆದಿದೆ. ಪ್ರಾಥಮಿಕ ತರಗತಿಗಳು ಆರಂಭವಾಗದಿರಬಹುದು ಎಂಬುದು ಸೂಚನೆಗಳಿವೆ. ಬಹುಶಃ ಒಂಬತ್ತನೇ ತರಗತಿಯಿಂದ ತರಗತಿಗಳನ್ನು ಆರಂಭಿಸಲು ಸರ್ಕಾರ ಯೋಚಿಸುತ್ತಿದೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾರ್ಗಸೂಚಿ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಹೆಚ್ಚಿನ ವಿವರಗಳನ್ನು ಮುಂದಿನ ಕ್ಯಾಬಿನೆಟ್ ಸಭೆಯ ನಂತರ ಮುಖ್ಯಮಂತ್ರಿ ಘೋಷಿಸುವರು.