ಕಾಸರಗೋಡು: ಹೈಯರ್ ಸೆಕೆಂಡರಿ ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್)ಯ ವತಿಯಿಂದ ನಿರ್ಗತಿಕರಿಗಾಗಿ ನಿರ್ಮಿಸಿರುವ ಸ್ನೇಹದ ಮನೆಯ ಕೀಲಿಕೈ ವಿತರಣಾ ಸಮಾರಂಭ ಅ. 1ರಂದು ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಲಿದೆ.
ಹೈಯರ್ ಸೆಕೆಂಡರಿ ನ್ಯಶಾನಲ್ ಸವೀಸ್ ಸ್ಕೀಂ ರಜತ ಮಹೋತ್ಸವ ಅಂಗವಾಗಿ ಕೇರಳ ರಾಜ್ಯ ಸಮಿತಿ ಜಾರಿಗೆ ತಂದಿರುವ ಸುವರ್ಣ ವಸತಿ ಯೋಜನೆಯ ಮುಂದುವರಿಕೆ ಭಾಗವಾಗಿ ಎನ್ನೆಸ್ಸೆಸ್ ವತಿಯಿಂದ ವಸತಿ ನಿರ್ಮಾಣ ಮಾಡಿರುವುದಾಗಿ ಎನ್ನೆಸ್ಸೆಸ್ ಜಿಲ್ಲಾ ಕನ್ವೀನರ್ ಹರಿದಾಸನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೊಲ್ಲಂ ಜಿಲ್ಲೆಯ ಕ್ಲಾಪ್ಪನ ಎಸ್.ವಿ ಎಚ್.ಎಚ್. ಎಸ್‍ನಲ್ಲಿ ಅ. 1ರಂದು ನಡೆಯುವ ರಾಜ್ಯಮಟ್ಟದ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯಾದ್ಯಂತ ಎನ್ನೆಸ್ಸೆಸ್ ನಿರ್ಮಿಸಿರುವ 25ಮನೆಗಳ ಕೀಲಿಕೈ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಅಂಗವೈಕಲ್ಯ ಹೊಂದಿದ ಇಬ್ಬರು ವಿದ್ಯಾರ್ಥಿಗಳಿಗೆ ಅ. 1ರಂದು ಮಧ್ಯಾಹ್ನ 3ಕ್ಕೆ ನೂತನ ಮನೆಯ ಕೀಲಿಕೈ ಹಸ್ತಾಂತರಿಸಲಾಗುವುದು. ವಿವಿಧ ಎನ್ನೆಸ್ಸೆಸ್ ಘಟಕಗಳು, ಜಿಲ್ಲಾ ಎನ್ನಸ್ಸೆಸ್ ಘಟಕ ಹಾಗೂ ವಿವಿಧ ದಾನಿಗಳ ನೆರವಿನಿಂದ 10ಕ್ಷ ರೂ. ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. ಎ. ಮಧುಸೂಧನನ್, ಎಂ.ಬಿ ಸಾಧು, ಎಂ. ಮಣಿಕಂಠನ್, ಶಾಹುಲ್‍ಹಮೀದ್ ಪುಂಡೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.