ಕುಂಬಳೆ: ಕೊರೋನಾದ ವೈಪರೀತ್ಯದಿಂದಾಗಿ 2020 ಹಾಗೂ 2021ನೇ ಸಾಲಿನ ಕೊಡಗಿನ ಗೌರಮ್ಮ ಸಣ್ಣಕಥಾಸ್ಪರ್ಧೆಯ ಪ್ರಶಸ್ತಿ ಹಾಗೂ ದ್ವಿತೀಯ, ತೃತೀಯ ಬಹುಮಾನಗಳನ್ನು ವಿಜೇತೆಯರಿಗೆ ಕಳುಹಿಸಲಾಯಿತು. ಮೊಬಲಗನ್ನು ಅವರ ಬ್ಯಾಂಕ್ ಖಾತೆಗೆ ಹಾಗೂ ಪ್ರಶಸ್ತಿ ಪತ್ರವನ್ನು ಕೊರಿಯರ್ ಮುಖಾಂತರ ವಿತರಿಸಲಾಗಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.