ತಿರುವನಂತಪುರಂ: ರಾಜ್ಯದಲ್ಲಿ ಇಂದು 20,487 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ತ್ರಿಶೂರ್ 2812, ಎರ್ನಾಕುಳಂ 2490, ತಿರುವನಂತಪುರ 2217, ಕೋಳಿಕ್ಕೋಡ್ 2057, ಕೊಲ್ಲಂ 1660, ಪಾಲಕ್ಕಾಡ್ 1600, ಮಲಪ್ಪುರಂ 1554, ಆಲಪ್ಪುಳ 1380, ಕೊಟ್ಟಾಯಂ 1176, ವಯನಾಡ್ 849, ಕಣ್ಣೂರು 810, ಇಡುಕ್ಕಿ 799, ಪತ್ತನಂತಿಟ್ಟ 799 ಮತ್ತು ಕಾಸರಗೋಡು 284 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 1,34,861 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ. 15.19 ಆಗಿದೆ. 794 ಸ್ಥಳೀಯಾಡಳಿತ ಪ್ರದೇಶಗಳಲ್ಲಿನ ವಾರ್ಡ್‌ಗಳು ವಾರಕ್ಕೊಮ್ಮೆ ಸೋಂಕಿನ ಜನಸಂಖ್ಯೆಯ ಅನುಪಾತ (WIPR) ಏಳಕ್ಕಿಂತ ಹೆಚ್ಚು ಹೊಂದಿವೆ. ಇವುಗಳಲ್ಲಿ 692 ವಾರ್ಡ್ ಗಳು ನಗರ ಪ್ರದೇಶಗಳಲ್ಲಿ ಮತ್ತು 3416 ವಾರ್ಡ್ ಗಳು ಗ್ರಾಮೀಣ ಪ್ರದೇಶದಲ್ಲಿವೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 6,13,495 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 5,81,858 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 31,637 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2272 ಮಂದಿ ಜನರು ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ, 2,31,792 ಮಂದಿ ಕೋವಿಡ್ ಪ್ರಕರಣಗಳಲ್ಲಿ, ಕೇವಲ 12.9 ಪ್ರತಿಶತದಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಇಂದು, 181 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 22,484 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 102 ಮಂದಿ ಜನರು ಹೊರ ರಾಜ್ಯದಿಂದ ಬಂದವರು. 19,497 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 793 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. 95 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 26,155 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1779, ಕೊಲ್ಲಂ 2063, ಪತ್ತನಂತಿಟ್ಟ 1344, ಆಲಪ್ಪುಳ 1738, ಕೊಟ್ಟಾಯಂ 1463, ಇಡುಕ್ಕಿ 863, ಎರ್ನಾಕುಳಂ 3229, ತ್ರಿಶೂರ್ 2878, ಪಾಲಕ್ಕಾಡ್ 1931, ಮಲಪ್ಪುರಂ 2641, ಕೋಝಿಕ್ಕೋಡ್ 3070, ವಯನಾಡ್ 986, ಕಣ್ಣೂರು 1550 ಮತ್ತು ಕಾಸರಗೋಡು 620 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 2,31,792 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 41,00,355 ಮಂದಿ ಇಲ್ಲಿಯವರೆಗೆ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.