ಕಾಸರಗೋಡು: ಕೋವಿಡ್ ನಿಬಂಧನೆ ಉಲ್ಲಂಘನೆ ಸಂಬಂಧ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 22678 ಮಂದಿಯನ್ನು ಪೆÇಲೀಸರು ಬಂಧಿಸಿದ್ದಾರೆ. ವಿವಿಧ ಠಾಣೆಗಳಲ್ಲಿ 16617 ಕೇಸುಗಳು ದಾಖಲಾಗಿವೆ. ಪ್ರಕರಣಕ್ಕೆ ಸಂಬಂಧಿಸಿ 26815 ವಾಹನಗಳನ್ನು ವಶಪಡಿಸಲಾಗಿದ್ದು, 27 ಮಂದಿಯನ್ನು ಬಂಧಿಸಲಾಗಿದೆ. 25 ಕೇಸುಗಳನ್ನು ದಾಖಲಿಸಿ, 202 ವಾಹನಗಳನ್ನು ವಶಪಡಿಸಲಾಗಿದೆ.
ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಸೋಮವಾರ ಕಾಸರಗೋಡು ಜಿಲ್ಲೆಯಲ್ಲಿ 951 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಈ ವರೆಗೆ ಒಟ್ಟು 219646 ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ.