ತಿರುವನಂತಪುರಂ: ರಾಜ್ಯದಲ್ಲಿ ಇಂದು 23,260 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ತ್ರಿಶೂರ್ 4013, ಎರ್ನಾಕುಳಂ 3143, ಕೋಝಿಕ್ಕೋಡ್ 2095, ತಿರುವನಂತಪುರ 2045, ಮಲಪ್ಪುರಂ 1818, ಅಲಪ್ಪುಳ 1719, ಪಾಲಕ್ಕಾಡ್ 1674, ಕೊಲ್ಲಂ 1645, ಕೊಟ್ಟಾಯಂ 1431, ಕಣ್ಣೂರು 1033, ಪತ್ತನಂತಿಟ್ಟ 983, ಇಡುಕ್ಕಿ 692, ವಯನಾಡ್ 639 ಮತ್ತು ಕಾಸರಗೋಡು 330 ಎಂಬಂತೆ ಸೋಂಕು ಪತ್ತೆಹಚ್ಚಲಾಗಿದೆ.
ಕಳೆದ 24 ಗಂಟೆಗಳಲ್ಲಿ 1,28,817 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆಯ ಅನುಪಾತವು ಎಂಟಕ್ಕಿಂತ ಹೆಚ್ಚಿನ 678 ಸ್ಥಳೀಯ ಸಂಸ್ಥೆಗಳಲ್ಲಿ 2507 ವಾರ್ಡ್ಗಳಿವೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 5,37,823 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 5,11,461 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರೆ, 26,362 ಮಂದಿ ಆಸ್ಪತ್ರೆಯ ಮೇಲ್ವಿಚಾರಣೆಯಲ್ಲಿದ್ದಾರೆ. 1899 ಮಂದಿನ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಸ್ತುತ, 1,88,926 ಕೋವಿಡ್ ಪ್ರಕರಣಗಳಲ್ಲಿ, ಶೇಕಡಾ 12.8 ರಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಇಂದು, ಕೋವಿಡ್ ನಿಂದಾಗಿ 131 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 23,296 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 159 ಮಂದಿ ಹೊರ ರಾಜ್ಯದಿಂದ ಬಂದವರು. 21,983 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 998 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಸುಮಾರು 120 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಇಂದು ಸೋಂಕು ಪತ್ತೆಯಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 20,388 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1978, ಕೊಲ್ಲಂ 1204, ಪತ್ತನಂತಿಟ್ಟ 686, ಅಲಪ್ಪುಳ 1404, ಕೊಟ್ಟಾಯಂ 1400, ಇಡುಕ್ಕಿ 623, ಎರ್ನಾಕುಳಂ 2202, ತ್ರಿಶೂರ್ 2928, ಪಾಲಕ್ಕಾಡ್ 1526, ಮಲಪ್ಪುರಂ 1864, ಕೋಝಿಕ್ಕೋಡ್ 2192, ವಯನಾಡ್ 663, ಕಣ್ಣೂರು 1336 ಮತ್ತು ಕಾಸರಗೋಡು 382 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 1,88,926 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 42,56,697 ಮಂದಿ ಜನರು ಕೋವಿಡ್ನಿಂದ ಮುಕ್ತರಾಗಿದ್ದಾರೆ.