ಕಾಸರಗೋಡು ವಾಹನ ಚಾಲನಾ ಪರೀಕ್ಷಾ ಮೈದಾನದಲ್ಲಿ ವಿಜಿಲೆನ್ಸ್ ದಾಳಿ: 2,40,000 ರೂ. ವಶ
0samarasasudhiಸೆಪ್ಟೆಂಬರ್ 29, 2021
ಕಾಸರಗೋಡು: ಕಾಞಂಗಾಡ್ ಗುರುವನಂನ ವಾಹನ ಚಾಲನಾ ಪರೀಕ್ಷಾ ಮೈದಾನದಲ್ಲಿ ಮಿಂಚಿನ ತಪಾಸಣೆ ವೇಳೆ 2,40,000 ರೂ ವಶಪಡಿಸಿಕೊಳ್ಳಲಾಗಿದೆ. ಜಾಗೃತ ದಳದಿಂದ ದಾಳಿ ನಡೆಸಲಾಗಿದೆ. ವಾಹನ ಪರವಾನಗಿಗಾಗಿ ಲಂಚ ಸ್ವೀಕರಿಸಲಾಗುತ್ತಿದೆ ಎಂಬ ಮಾಹಿತಿಯ ಆಧಾರದ ಮೇಲೆ ವಿಜಿಲೆನ್ಸ್ ಮಿಂಚಿನ ತಪಾಸಣೆ ನಡೆಸಿತು.
ತರಬೇತಿ ಪಡೆಯುವವರ ಪರವಾನಗಿಯ ಅವಧಿ ಮುಗಿಯುವ ಮೊದಲು ಚಾಲನಾ ಪರೀಕ್ಷೆಯನ್ನು ನಡೆಸುವುದಕ್ಕೆ ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಲಾಯಿತು . ಕಾಞಂಗಾಡ್ ಮೋಟಾರ್ ವಾಹನ ಅಧಿಕಾರಿಗಳಿಗೆ ಎಂದು ಏಜೆಂಟ್ ಮೂಲಕ ಸಂಗ್ರಹಿಸಿದ 2,40,000 ರೂಗಳನ್ನು ತಪಾಸಣಾ ತಂಡ ವಶಪಡಿಸಿಕೊಂಡಿದೆ.