ಕುಂಬಳೆ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕೆ.ಟಿ.ವೇಣುಗೋಪಾಲ್ ಸ್ಮಾರಕ ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ ವಿಜೇತ ಅಚ್ಯುತ ಚೇವಾರ್ ಅವರಿಗೆ ಅಭಿನಂದನೆ ಮತ್ತು ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್ ಅವರ ಚಿತ್ರ ಪ್ರದರ್ಶನ ಸೆ.25 ರಂದು ಬೆಳಿಗ್ಗೆ 9 ರಿಂದ ಬಂದ್ಯೋಡು ಸಮೀಪದ ವಳಯಂ ನ ಡಿ.ಎಂ.ಕಬನಾ ರಿಸೋರ್ಟ್ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 9ಕ್ಕೆ ಪ್ರದೀಪ್ ಬೇಕಲ್ ಅವರ ಚಿತ್ರಗಳ ಪ್ರದರ್ಶನವನ್ನು ಜಿ.ಪಂ.ಸದಸ್ಯ ಗೋಲ್ಡನ್ ರಹಮಾನ್ ಉದ್ಘಾಟಿಸುವರು. ಬಳಿಕ ಅಚ್ಯುತ ಚೇವಾರ್ ಅವರ ಅಭಿನಂದನಾ ಸಮಾರಂಭದಲ್ಲಿ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು, ಬೇಳ ಶೋಕಮಾತಾ ದೇವಾಲಯದ ಧರ್ಮಗುರು ಸ್ಟ್ಯಾನಿ ಪಿರೇರ, ಉದ್ಯಾವರ ಸಾವಿರ ಜಮಾಅತ್ ಅ|ಧ್ಯಕ್ಷ ಸಯ್ಯದ್ ಯು.ಕೆ.ಸೈಫುಲ್ಲ ತಂಙಳ್ ಉಪಸ್ಥಿತರಿರುವರು. ಶ|ಆಸಕ ಎ.ಕೆ.ಎಂ.ಅ|ಶ್ರಫ್ ಉದ್ಘಾಟಿಸುವರು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅ|ಧ್ಯಕ್ಷತೆ ವಹಿಸುವರು. ಹಿರಿಯ ದಂತ ವೈದ್ಯ ಡಾ.ಮುರಳೀ ಮೋಹನ್ ಚೂಂತಾರು, ಹಿರಿಯ ಪತ್ರಕರ್ತ ಸುರೇಂದ್ರನ್ ಕೆ., ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಶಂಕರ ಸಾರಡ್ಕ, ಮಂಗಳೂರು ಒಮೇಗಾ ಆಸ್ಪತ್ರೆಯ ಆಡಳಿತಾಧಿಕಾರಿ ಎಸ್.ಎಲ್.ಭಾರದ್ವಾಜ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರು.