ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಸೋಮವಾರ ಮತ್ತೆ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ₹25 ಪೈಸೆ ಹೆಚ್ಚಿಸಿವೆ. ಪೆಟ್ರೊಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಈ ಮೂಲಕ ಸತತ ಎರಡನೇ ದಿನ ಹಾಗೂ ಸೆಪ್ಟೆಂಬರ್ 24ರಿಂದ ಇಲ್ಲಿಯವರೆಗೆ ಮೂರನೇ ಬಾರಿಗೆ ಡೀಸೆಲ್ ಬೆಲೆ ಹೆಚ್ಚಿದಂತಾಗಿದೆ.
ಪರಿಷ್ಕೃತ ದರದ ಪ್ರಕಾರ ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ ₹89.32 ಮತ್ತು ಮುಂಬೈನಲ್ಲಿ ₹96.94ರಷ್ಟಾಗಿದೆ.