HEALTH TIPS

ಉಳಿಯತ್ತಡ್ಕರ ಮತ್ತೊಂದು ಕೃತಿ ರಾಮ ಕಂಡ ಭೀಮ ಬಿಡುಗಡೆ 25 ರಂದು

         ಬದಿಯಡ್ಕ: ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕರ ನೂತನ ಕೃತಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅoಬೇಡ್ಕರ್ ಅವರ ಜೀವನ ಕಥನ ಕವನ  ರಾಮ ಕಂಡ ಭೀಮ ಸೆ.25 ರಂದು ಬಿಡುಗಡೆಗೊಳ್ಳಲಿದೆ. 

       ಬದಿಯಡ್ಕದ ಸಮತಾ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಅಪರಾಹ್ನ 2 ಗಂಟೆಗೆ ಬದಿಯಡ್ಕದ ಸಂಸ್ಕøತಿ ಭವನದಲ್ಲಿ ಕೃತಿ ಬಿಡುಗಡೆಗೊಳ್ಳಲಿದೆ. ಸಾಹಿತಿ ರಾಜಶ್ರೀ ಟಿ.ರೈ ಪೆರ್ಲ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಡಿಕೇರಿಯ ಪೋಲೀಸ್ ಅಧಿಕಾರಿ ಕೆ.ಎಸ್.ಧನಂಜಯ ಬಿಡುಗಡೆಗೊಳಿಸುವರು. ಸರಿಚಂದನ ಕನ್ನಡ ಯುವ ಬಳಗದ ಅ|ಧ್ಯಕ್ಷ, ಶಿಕ್ಷಕ ಕಾರ್ತಿಕ್ ಪಡ್ರೆ ಕೃತಿ ಪರಿಚಯ ಮಾಡುವರು. ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ|.ರತ್ನಾಕರ ಮಲ್ಲಮೂಲೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕವಿ, ವೈಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು, ಕತೆಗಾರ ಬಿ.ಎಸ್.ಏತಡ್ಕ, ಸಂಘಟಕ ಜಗದೀಶ ಕೂಡ್ಲು ಶುಭಹಾರೈಸುವರು. ಸುಜಾತಾ ಕನಿಯಾಲ ಕಥನ ಕವನದ ವಾಚನ ನಡೆಸುವರು. ಕವಿ ರಾಧಾಕೃಷ್ಣ ಉಳಿಯತ್ತಡ್ಕ ಉಪಸ್ಥಿತರಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries