ತಿರುವನಂತಪುರಂ: ರಾಜ್ಯದಲ್ಲಿ ಇಂದು 26,701 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಕೋಝಿಕೋಡ್ 3366, ತ್ರಿಶೂರ್ 3214, ಎರ್ನಾಕುಳಂ 2915, ಮಲಪ್ಪುರಂ 2568, ಪಾಲಕ್ಕಾಡ್ 2373, ಕೊಲ್ಲಂ 2368, ತಿರುವನಂತಪುರ 2103, ಕೊಟ್ಟಾಯಂ 1662, ಆಲಪ್ಪುಳ 1655, ಕಣ್ಣೂರು 1356, ಇಡುಕ್ಕಿ 1001, ಪತ್ತನಂತಿಟ್ಟ 947, ವಯನಾಡ್ 793 ಮತ್ತು ಕಾಸರಗೋಡು 380 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 1,55,543 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ. 17.17. ಆಗಿದೆ. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನಾಟ್, ಟ್ರುನಾಟ್, ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 3,23,90,313 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತವು ಏಳಕ್ಕಿಂತ ಹೆಚ್ಚಿನ 296 ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಿದೆ. ಇವುಗಳಲ್ಲಿ 81 ನಗರ ಪ್ರದೇಶಗಳಲ್ಲಿ ಮತ್ತು 215 ಗ್ರಾಮೀಣ ಪ್ರದೇಶಗಳಲ್ಲಿವೆ.
ಕೋವಿಡ್ ಬಾಧಿಸಿ ಕಳೆದ 24 ಗಂಟೆಗಳಲ್ಲಿ 74 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 21,496 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 96 ಮಂದಿ ಜನರು ಹೊರ ರಾಜ್ಯದಿಂದ ಬಂದವರು. 25,481 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 1046 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕ್ಕೋಡ್ 3304, ತ್ರಿಶೂರ್ 3195, ಎರ್ನಾಕುಳಂ 2887, ಮಲಪ್ಪುರಂ 2514, ಪಾಲಕ್ಕಾಡ್ 1696, ಕೊಲ್ಲಂ 2359, ತಿರುವನಂತಪುರ 1988, ಕೊಟ್ಟಾಯಂ 1565, ಆಲಪ್ಪುಳ 1620, ಕಣ್ಣೂರು 1278, ಇಡುಕ್ಕಿ 987, ಪತ್ತನಂತಿಟ್ಟ 939, ವಯನಾಡ್ 780 ಮತ್ತು ಕಾಸರಗೋಡು 369 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 78 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 16, ಪಾಲಕ್ಕಾಡ್ 12, ವಯನಾಡ್ 11, ಕೊಲ್ಲಂ 8, ಕಾಸರಗೋಡು 7, ಕೊಟ್ಟಾಯಂ 5, ಎರ್ನಾಕುಳಂ 4, ತಿರುವನಂತಪುರ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್ 3, ಇಡುಕ್ಕಿ 2 ಮತ್ತು ಆಲಪ್ಪುಳ 1 ಎಂಬಂತೆ ಸೋಂಕು ಬಾಧಿಸಿದೆ.
ರೋಗನಿರ್ಣಯಗೊಂಡ 28,900 ಮಂದಿ ಗುಣಮುಖರಾಗಿದ್ದಾರೆ. ತಿರುವನಂತಪುರ 1876, ಕೊಲ್ಲಂ 2400, ಪತ್ತನಂತಿಟ್ಟ 1029, ಆಲಪ್ಪುಳ 1694, ಕೊಟ್ಟಾಯಂ 2735, ಇಡುಕ್ಕಿ 865, ಎರ್ನಾಕುಳಂ 2422, ತ್ರಿಶೂರ್ 2696, ಪಾಲಕ್ಕಾಡ್ 2780, ಮಲಪ್ಪುರಂ 3317, ಕೋಝಿಕ್ಕೋಡ್ 3674, ವಯನಾಡ್ 955, ಕಣ್ಣೂರು 1860 ಮತ್ತು ಕಾಸರಗೋಡು 597 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 2,47,791 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಅವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 39,37,996 ಮಂದಿ ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 6,24,301 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 5,91,061 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 33,240 ಮಂದಿ ಆಸ್ಪತ್ರೆ ಮೇಲ್ವಿಚಾರಣೆಯಲ್ಲಿದ್ದಾರೆ. ಒಟ್ಟು 2604 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.