ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಅರ್ಹ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಇಲಾಖೆಗಳ ಕೇಂದ್ರ ಕಚೇರಿ ಅಥವಾ ದೇಶದ ಯಾವುದೇ ಭಾಗಕ್ಕೆ ಬೇಕಾದರೂ ನೇಮಕ ಮಾಡಬಹುದಾಗಿದೆ. ಅರ್ಜಿಸಲ್ಲಿಸುವಾಗ ಅಭ್ಯರ್ಥಿಗಳ ದಾಖಲೆ/ ಪ್ರಮಾಣಪತ್ರಗಳು ಹಿಂದಿ ಅಥವಾ ಇಂಗ್ಲಿಷ್ ಹೊರತಾಗಿ ಬೇರೆ ಭಾಷೆಯಲ್ಲಿದ್ದರೆ ಆ ದಾಖಲೆಗಳಿಗೆ ಗೆಜೆಟೆಡ್ ಅಧಿಕಾರಿ/ ನೋಟರಿ ದೃಢೀಕರಣ ಮಾಡಿದ ಪ್ರತಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 25 ರೂ. ಅರ್ಜಿಶುಲ್ಕ ಪಾವತಿಸಬೇಕು.
ಹುದ್ದೆ ವಿವರ
* ಪ್ರಾದೇಶಿಕ ನಿರ್ದೇಶಕ - 1
* ಡೆಪ್ಯುಟಿ ಸೆಂಟ್ರಲ್ ಇಂಟೆಲಿಜೆನ್ಸ್ ಅಧಿಕಾರಿ (ಟೆಕ್ನಿಕಲ್)- 10
* ಸಹಾಯಕ ಪ್ರಾಧ್ಯಾಪಕ
- ಕೆಮಿಸ್ಟ್ರಿ - 1
- ಎಲೆಕ್ಟ್ರಿಕಲ್ ಇಂಜಿನಿಯರಿಂಗ್ - 1
- ಎಲೆಕ್ಟ್ರಾನಿಕ್ಸ್ ಆಯಂಡ್ ಕಮ್ಯುನಿಕೇಷನ್-2
- ಎಲೆಕ್ಟ್ರಾನಿಕ್ಸ್ ಆಯಂಡ್ ಇನ್ಸ್ಟ್ರುಮೆಂಟೇಷನ್-1
- ಮ್ಯಾಥಮೆಟಿಕ್ಸ್ - 1
- ಮ್ಯಾನುಯಾಕ್ಚರಿಂಗ್ ಇಂಜಿನಿಯರಿಂಗ್ - 1
- ಮೆಕಾನಿಕಲ್ ಇಂಜಿನಿಯರಿಂಗ್ - 1
* ಸೀನಿಯರ್ ಸೈಂಟಿಫಿಕ್ ಆಫೀಸರ್ ಗ್ರೇಡ್ -2 (ಎಲೆಕ್ಟ್ರಾನಿಕ್ಸ್) - 3
* ಜೂನಿಯರ್ ರಿಸರ್ಚ್ ಆಫೀಸರ್ (ರಿಸರ್ಚ್, ಸ್ಟಾ$ಟಿಸ್ಟಿಕ್ಸ್ ಆಯಂಡ್ ಅನಲಿಸಿಸ್) - 3
* ಅಸಿಸ್ಟೆಂಟ್ ಇಂಜಿನಿಯರ್/ ಅಸಿಸ್ಟೆಂಟ್ ಸರ್ವೇಯರ್ (ವರ್ಕ್ ಇಂಜಿನಿಯರಿಂಗ್ ಅಸಿಸ್ಟಂಟ್ ಸಿವಿಲ್) - 3
ಯಾವೆಲ್ಲ ಇಲಾಖೆಯಲ್ಲಿ ನೇಮಕಾತಿ?
ಗಾಜಿಯಾಬಾದ್ನಲ್ಲಿರುವ ರಾಷ್ಟ್ರೀಯ ಸಾವಯವ ಕೃಷಿ ಕೇಂದ್ರ, ಗುಪ್ತಚರ ದಳ, ನಾಗರಿಕ ಸಿಬ್ಬಂದಿ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನೌಕಾಪಡೆಯ ಸಮಗ್ರ ಕೇಂದ್ರ ಕಚೇರಿ, ಲೋಕೋಪಯೋಗಿ ಇಲಾಖೆ, ಕೇಂದ್ರ ಲೋಕಸೇವಾ ಆಯೋಗ, ರಕ್ಷಣಾ ಉತ್ಪಾದನೆ ಇಲಾಖೆಯ ಡೈರೆಕ್ಟೊರೇಟ್ ಜನರಲ್ ಕ್ವಾಲಿಟಿ ಅಶುರೆನ್ಸ್ ಇಲಾಖೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು.
ಶೈಕ್ಷಣಿಕ ಅರ್ಹತೆ: ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆಯಂಡ್ ಕಮ್ಯುನಿಕೇಷನ್ನಲ್ಲಿ ಬಿಇ/ಬಿ.ಟೆಕ್/ ಬಿ.ಎಸ್ಸಿ, ಮೈಕ್ರೋಬಯಾಲಜಿ, ಸಸ್ಯಶಾಸ್ತ್ರ, ಕೃಷಿ, ಭೌತಶಾಸ್ತ್ರ, ಲೆಕ್ಕಶಾಸ್ತ್ರದಲ್ಲಿ ಎಂಎಸ್ಸಿ, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ ಶೇ.55 ಅಂಕ ಪಡೆದಿರಬೇಕು.
ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30 ರಿಂದ 55 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 30.9.2021
ಅಧಿಸೂಚನೆಗೆ: https://bit.ly/3A6e8O8
ಮಾಹಿತಿಗೆ: http://www.upsc.gov.in