ನವದೆಹಲಿ: ಕೊರೊನಾ ಸಮಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದುದರ ಹೊರತಾಗಿಯೂ ಅಪರಾಧ ಪ್ರಮಾಣ ಶೇ.28ರಷ್ಟು ಏರಿಕೆಯಾಗಿರುವುದಾಗಿ ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (NCRB) ಬಹಿರಂಗಪಡಿಸಿದೆ.
ಅಪರಾಧಗಳಲ್ಲಿ ರಕ್ತಪಾತವನ್ನೊಳಗೊಂಡ ಅಪರಾಧಗಳ ಪ್ರಮಾಣ ಕಡಿಮೆಯಾಗಿದ್ದರೂ ಫೇಕ್ ನ್ಯೂಸ್, ಕಲಬೆರಕೆ, ಪ್ರತಿಭಟನೆ ಪರಿಸರ ಕಾಯ್ದೆ ಉಲ್ಲಂಘನೆ, ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಪ್ರಕರಣಗಳು ಹೆಚ್ಚಳವಾದ ಪರಿಣಾಮ ಒಟ್ಟು ಅಪರಾಧ ಪ್ರಮಾಣ ಏರಿಕೆ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2018ರಲ್ಲಿ 280 ಸುಳ್ಳು ಸುದ್ದಿ ಪ್ರಕರಣಗಳು ದಾಖಲಾಗಿದ್ದವು. 2020ರಲ್ಲಿ 1,527 ಸುಳ್ಳು ಸುದ್ದಿ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ ಆತಂಕಕಾರಿ ಬೆಳವಣಿಗೆಯಲ್ಲಿ ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದಲೂ ಕಲಬೆರಕೆ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿರುವುದು.
2018ರಲ್ಲಿ 49 ಕಲಬೆರಕೆ ಸಂಬಂಧಿ ದೂರುಗಳು ದಾಖಲಾಗಿದ್ದವು. ಕಳೆದ ವರ್ಷ 625 ಕಲಬೆರಕೆ ಸಂಬಂಧಿ ದೂರುಗಳು ದಾಖಲಾಗಿವೆ.