ತಿರುವನಂತಪುರಂ: ಕೇರಳದಲ್ಲಿ ಇಂದು 29,682 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ತ್ರಿಶೂರ್ 3474, ಎರ್ನಾಕುಳಂ 3456, ಮಲಪ್ಪುರಂ 3166, ಕೋಝಿಕೋಡ್ 2950, ಪಾಲಕ್ಕಾಡ್ 2781, ಕೊಲ್ಲಂ 2381, ತಿರುವನಂತಪುರ 2314, ಕೊಟ್ಟಾಯಂ 2080, ಆಲಪ್ಪುಳ 1898, ಕಣ್ಣೂರು 1562, ಪತ್ತನಂತಿಟ್ಟ 1154, ಇಡುಕ್ಕಿ 1064, ವಯನಾಡ್ 923 ಮತ್ತು ಕಾಸರಗೋಡು 479 ಎಂಬಂತೆ ಸೋಂಕು ವರದಿಯಾಗಿದೆ.
ಕಳೆದ 24 ಗಂಟೆಗಳಲ್ಲಿ 1,69,237 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ.17.54 ಆಗಿದೆ. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನಾಟ್, ಟ್ರುನಾಟ್, ಪಿಸಿಆರ್, ಆರ್ಟಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 3,22,34,770 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತವು ಏಳಕ್ಕಿಂತ ಹೆಚ್ಚಿನ 296 ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಿದೆ. ಇವುಗಳಲ್ಲಿ 81 ನಗರ ಪ್ರದೇಶಗಳಲ್ಲಿ ಮತ್ತು 215 ಗ್ರಾಮೀಣ ಪ್ರದೇಶಗಳಲ್ಲಿವೆ. ಕಳೆದ 24 ಗಂಟೆಗಳಲ್ಲಿ 142 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 21,422 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 185 ಮಂದಿ ರಾಜ್ಯದ ಹೊರಗಿಂದ ಬಂದವರು. 28,008 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 1357 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತ್ರಿಶೂರ್ 3443, ಎರ್ನಾಕುಳಂ 3496, ಮಲಪ್ಪುರಂ 2980, ಕೋಝಿಕ್ಕೋಡ್ 2913, ಪಾಲಕ್ಕಾಡ್ 1852, ಕೊಲ್ಲಂ 2372, ತಿರುವನಂತಪುರ 2180, ಕೊಟ್ಟಾಯಂ 1986, ಆಲಪ್ಪುಳ 1869, ಕಣ್ಣೂರು 1467, ಪತ್ತನಂತಿಟ್ಟ 1129, ಇಡುಕ್ಕಿ 1051, ವಯನಾಡ್ 905 ಮತ್ತು ಕಾಸರಗೋಡು 465 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
132 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ತ್ರಿಶೂರ್ 21, ವಯನಾಡು 18, ಪಾಲಕ್ಕಾಡ್ 17, ಕಣ್ಣೂರು 15, ಕಾಸರಗೋಡು 12, ಪತ್ತನಂತಿಟ್ಟ 10, ಕೊಲ್ಲಂ 9, ಕೊಟ್ಟಾಯಂ, ಮಲಪ್ಪುರಂ 6, ಎರ್ನಾಕುಳಂ 5, ತಿರುವನಂತಪುರ, ಆಲಪ್ಪುಳ ತಲಾ 4, ಕೋಝಿಕ್ಕೋಡ್ 3 ಮತ್ತು ಇಡುಕ್ಕಿ 2 ಎಂಬಂತೆ ಕೋವಿಡ್ ಗೆ ಒಳಗಾಗಿದ್ದಾರೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 25,910 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1748, ಕೊಲ್ಲಂ 1939, ಪತ್ತನಂತಿಟ್ಟ 1039, ಅಲಪ್ಪುಳ 1517, ಕೊಟ್ಟಾಯಂ 1857, ಇಡುಕ್ಕಿ 787, ಎರ್ನಾಕುಳಂ 2828, ತ್ರಿಶೂರ್ 2791, ಪಾಲಕ್ಕಾಡ್ 2484, ಮಲಪ್ಪುರಂ 2805, ಕೋಝಿಕ್ಕೋಡ್ 2864, ವಯನಾಡ್ 888, ಕಣ್ಣೂರು 1764 ಮತ್ತು ಕಾಸರಗೋಡು 599 ಗುಣಮುಖರಾಗಿದ್ದಾರೆ. ಇದರೊಂದಿಗೆ 2,50,065 ಮಂದಿ ಜನರಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಅವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 39,09,096 ಮಂದಿ ಜನರು ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 6,03,968 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 5,70,557 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರೆ 33,441 ಮಂದಿ ಆಸ್ಪತ್ರೆಯ ಮೇಲ್ವಿಚಾರಣೆಯಲ್ಲಿದ್ದಾರೆ. ಒಟ್ಟು 2,780 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.