ತ್ರಿಶೂರ್: ವಿಯೂರು ಜಿಲ್ಲಾ ಕಾರಾಗೃಹದಲ್ಲಿ ಕೊರೊನಾ ಹರಡುವಿಕೆ ಹೆಚ್ಚುತ್ತಿದೆ. 30 ಖೈದಿಗಳಲ್ಲಿ ಈ ರೋಗ ದೃಢಪಟ್ಟಿದೆ. ಅವರಲ್ಲಿ ಒಬ್ಬರನ್ನು ತ್ರಿಶೂರ್ ವೈದ್ಯಕೀಯ ಕಾಲೇಜಿಗೆ ಮತ್ತು 29 ಜನರನ್ನು ಕೊರೊನಾ ಪ್ರಾಥಮಿಕ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಜೈಲಿನೊಳಗೆ ರೋಗದ ಹರಡುವಿಕೆಯು ತೀವ್ರಗೊಂಡಿರುವುದರಿಂದ ನಾಳೆ ಇತರರನ್ನು ಪರೀಕ್ಷಿಸಲಾಗುವುದು ಎಂದು ತಿಳಿದುಬಂದಿದೆ.
ಏತನ್ಮಧ್ಯೆ, ರೋಗಿಗಳನ್ನು ಜೈಲಿನಿಂದ ಆಸ್ಪತ್ರೆಗೆ ಸಾಗಿಸುವ ಆಂಬ್ಯುಲೆನ್ಸ್ ಸೋರಿಕೆಯಾಗುತ್ತಿದೆ ಎಂಬ ವರದಿಗಳಿವೆ. ಆಂಬ್ಯುಲೆನ್ಸ್‍ನ ಛಾವಣಿಯ ದೊಡ್ಡ ರಂಧ್ರದ ಮೂಲಕ ನೀರು ಪ್ರವೇಶಿಸುತ್ತದೆ. ವಾಹನದ ಹಲವು ಭಾಗಗಳು ಹಾನಿಗೊಂಡ ಸ್ಥತಿಯಲ್ಲಿವೆ. ವಾಹನವನ್ನು ದುರಸ್ತಿ ಮಾಡಿಲ್ಲ ಎಂದು ಆರೋಪಿಸಲಾಗಿದೆ.
ಸಂಸದ ಟಿಎನ್ ಪ್ರತಾಪ್ ಈ ಬಗ್ಗೆ ಮಾತನಾಡಿ,ಕೂಡಲೇ ವ್ಯವಸ್ಥೆಗೊಳ್ಳಲು ಆಗ್ರಹಿಸಿದ್ದಾರೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ಆಂಬುಲೆನ್ಸ್ ಗೆ ಸಂಸದರ ನಿಧಿಯಿಂದ ಹಣ ನೀಡಲಾಗುತ್ತದೆ ಎಂದು ಪ್ರತಾಪ್ ಹೇಳಿದರು.