HEALTH TIPS

ಏಳು ಐಐಟಿಗಳ ಮುಂದುವರಿದ ಬಹಿಷ್ಕಾರ; ಉನ್ನತ 300 ಸ್ಥಾನಗಳಲ್ಲಿ ಭಾರತೀಯ ವಿಶ್ವವಿದ್ಯಾನಿಲಯಗಳಿಗಿಲ್ಲ ಸ್ಥಾನ!

                ನವದೆಹಲಿಟೈಮ್ಸ್ ಹೈಯರ್ ಎಜ್ಯುಕೇಶನ್ ವರ್ಲ್ಡ್ ಯುನಿವರ್ಸಿಟಿ (THE) ಶ್ರೇಯಾಂಕಗಳನ್ನು ಏಳು ಐಐಟಿ ಗಳ ಬಹಿಷ್ಕಾರ ಮುಂದುವರಿದಿದ್ದು ಜಾಗತಿಕ ಒಡಂಬಡಿಕೆಯ ಟೇಬಲ್ ಬಿಡುಗಡೆ ಮಾಡಿರುವ ಮಾಹಿತಿಯಂತೆ ಉನ್ನತ 300 ಸಂಸ್ಥೆಗಳಲ್ಲಿ ಒಂದೇ ಒಂದು ಭಾರತೀಯ ಸಂಸ್ಥೆ ಇಲ್ಲ ಎಂಬುದು ತಿಳಿದುಬಂದಿದೆ. ದೇಶದ ಅತ್ಯುನ್ನತ ಸಂಸ್ಥೆಯಾಗಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) 301-350 ನೇ ಆವರಣದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ನಂತರದ ಸ್ಥಾನವನ್ನು ಅದರ ನಂತರ ಐಐಟಿ ರೋಪರ್ ಮತ್ತು ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ರಿಸರ್ಚ್ ಪಡೆದುಕೊಂಡಿದೆ. ಎರಡೂ 351-400 ಆವರಣದಲ್ಲಿದೆ.

           ಒಟ್ಟಾರೆ ಹೇಳುವುದಾದರೆ ವಿಶ್ವದ 1,000 ವಿಶ್ವವಿದ್ಯಾನಿಲಯಗಳಲ್ಲಿ ಭಾರತದಲ್ಲಿ 35 ವಿಶ್ವವಿದ್ಯಾನಿಲಯಗಳಿವೆ. ಒಟ್ಟು ಶ್ರೇಯಾಂಕದಲ್ಲಿ ಇದು ಎರಡನೆಯ ಅತ್ಯಧಿಕವಾಗಿದೆ. ಕಳೆದ ವರ್ಷ ಈ ಸಂಖ್ಯೆ 36 ಆಗಿತ್ತು. ಇನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಸತತ ಆರನೇ ವರ್ಷವೂ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಮುಂಬೈ, ದೆಹಲಿ, ಕಾನ್ಪುರ, ಗುವಾಹಟಿ, ಮದ್ರಾಸ್, ರೂರ್‌ಕಿ, ಖಾರಗ್‌ಪುರ ವಿದ್ಯಾಲಯಗಳು THE ಜಾಗತಿಕ ಶ್ರೇಯಾಂಕದಲ್ಲಿ ಭಾಗವಹಿಸದಿರುವುದು ಇದು ಸತತವಾಗಿ ಎರಡನೇ ವರ್ಷವಾಗಿದೆ.

          ಕಳೆದ ವರ್ಷ ಏಪ್ರಿಲ್‌ನಲ್ಲಿ ಈ ಸಂಸ್ಥೆಗಳು ತಮ್ಮ ಬಹಿಷ್ಕಾರವನ್ನು ಪ್ರಕಟಿಸಿದ್ದವು, ಪಾರದರ್ಶಕತೆಯನ್ನು ಆಧರಿಸಿ ಈ ವಿಶ್ವವಿದ್ಯಾಲಯಗಳು ಯಾವುದೂ ಕೂಡ ವಿಶ್ವದ ಅತ್ಯುತ್ತಮ 300 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆಯಲಿಲ್ಲ. ಬಹಿಷ್ಕಾರ ಘೋಷಿಸುವ ಮುನ್ನ ಐಐಟಿಗಳು THE ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದು ಈ ಸಮಯದಲ್ಲಿ ಶ್ರೇಯಾಂಕದ ವಿಷಯದಲ್ಲಿ “ಪಾರದರ್ಶಕತೆ” ಸಮಸ್ಯೆಗಳನ್ನು ಬೊಟ್ಟು ಮಾಡಿದ್ದು, ವಿಶೇಷವಾಗಿ ಸೈಟೇಶನ್ ಶ್ರೇಯಾಂಕದಲ್ಲಿ ಭಾಗವಹಿಸುವ ವಿಶ್ವವಿದ್ಯಾಲಯಗಳು ತಮ್ಮ ಅಂಕವನ್ನು ಹೆಚ್ಚಿಸಲು ಸಹಕಾರಿ ಸಂಶೋಧನಾ ಯೋಜನೆಗಳನ್ನು ಬಳಸುವುದನ್ನು THE ಗೆ ಪ್ರಶ್ನಿಸಿದ್ದವು. ಇಂತಹ ಸಂಶೋಧನಾ ಯೋಜನೆಗಳು ಸಂಬಂಧಿತ ಲೇಖಕರ ಸಂಯೋಜನೆಯಿಂದ ಹೆಚ್ಚಿನ ಉಲ್ಲೇಖವನ್ನು ಪಡೆದಿರುತ್ತವೆ ಎಂಬುದಾಗಿ ಐಐಟಿಗಳು THE ಕ್ಕೆ ತಿಳಿಸಿವೆ.

           ಹಾಗಾಗಿ ಇಂತಹ ಯೋಜನೆಗಳ ಭಾಗವಾಗಿರುವ ಸಂಸ್ಥೆಗಳು ಇತರ ಸಂಸ್ಥೆಗಳ ವಿರುದ್ಧ ಅಸಮಾನತೆಯ ಲಾಭವನ್ನು ಹೊಂದಿರುತ್ತವೆ ಏಕೆಂದರೆ ಒಂದೇ ಪೇಪರ್ ಅನ್ನು ಜಾಗತಿಕವಾಗಿ ಹಲವಾರು ಬಾರಿ ಉಲ್ಲೇಖಿಸಲಾಗುತ್ತದೆ ಎಂದು ಐಐಟಿಗಳು ದೂರಿವೆ.

          ಸಭೆಗಳ ನಂತರ ತಮ್ಮ ಮಾನದಂಡಗಳಲ್ಲಿ ಏನಾದರೂ ಸ್ವಲ್ಪ ಬದಲಾವಣೆಗಳನ್ನು ಮಾಡಬಹುದೆಂದು ನಾವು ನಿರೀಕ್ಷಿಸಿದ್ದೆವು ಆದರೆ ಈ ಬಗ್ಗೆ ನಮಗೆ ಮಾಹಿತಿ ಇಲ್ಲದಿರುವುದರಿಂದ ನಮ್ಮ ಬಹಿಷ್ಕಾರ ಮುಂದುವರಿಯುತ್ತದೆ ಎಂದು ಐಐಟಿ ನಿರ್ದೇಶಕರೊಬ್ಬರು ತಿಳಿಸಿದ್ದಾರೆ.

          THE ದ ಸಂಪಾದಕೀಯ ನಿರ್ದೇಶಕರಾದ ಫಿಲ್ ಬ್ಯಾಟಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿರುವ ಮಾಹಿತಿಯ ಪ್ರಕಾರ ನಮ್ಮ ಶ್ರೇಯಾಂಕ ವಿಧಾನವು ಹೆಚ್ಚು ಪಾರದರ್ಶಕ ಹಾಗೂ ಜಾಗತಿಕವಾಗಿ ವಿಶ್ವಾಸಾರ್ಹತೆಯನ್ನು ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ. ಭಾಗವಹಿಸುವ ವಿಶ್ವವಿದ್ಯಾಲಯಗಳೊಂದಿಗೆ ನಂಬಿಕೆ ಹಾಗೂ ಪಾರದರ್ಶಕತೆಯ ವ್ಯವಸ್ಥೆಯನ್ನು ಆಧರಿಸಿದೆ ಎಂದು ತಿಳಿಸಿದ್ದಾರೆ. ಸಂಪೂರ್ಣ ವಿಶ್ವವೇ ನಮ್ಮ ಮೇಲೆ ನಂಬಿಕೆ ಇರಿಸಿದೆ. ಈ ಶ್ರೇಯಾಂಕದಲ್ಲಿ ಭಾಗವಹಿಸದಿರುವ ಐಐಟಿಗಳು ಮುಂದಿನ ದಿನಗಳಲ್ಲಿ ಅನಾನುಕೂಲಗಳನ್ನು ಪಡೆದುಕೊಳ್ಳಲಿವೆ ಎಂದವರು ಎಚ್ಚರಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries