HEALTH TIPS

ಕೇರಳದ ವೈದ್ಯನಿಗೆ 4 ಬಾರಿ ಕೋವಿಡ್ ಪಾಸಿಟಿವ್: ಈಗಲೂ ಕೋವಿಡ್ ವಾರ್ಡ್‌ನಲ್ಲೇ ಕೆಲಸ!

               ತಿರುವನಂತಪುರಕೇರಳದ ಕೋವಿಡ್ ವಾರ್ಡ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರೊಬ್ಬರಿಗೆ ನಾಲ್ಕು ಬಾರಿ ಕೋವಿಡ್ -19 ಪಾಸಿಟಿವ್ ಬಂದಿದ್ದು, ಈಗಲೂ ಅವರು ಕೋವಿಡ್ ವಾರ್ಡ್‌ಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಮಾದರಿಯಾಗಿದ್ದಾರೆ.

             ಕೋವಿಡ್ -19 ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡ ನಂತರವೂ ಎರಡು ಬಾರಿ ಸೋಂಕಿಗೆ ಒಳಗಾದ ನಂತರ, ವೈದ್ಯರ ಗಂಟಲು ದ್ರವವನ್ನು ಜಿನೋಮಿಕ್ ವಿಶ್ಲೇಷಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ.

               ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿನ ತುರ್ತು ವಿಭಾಗದ ವೈದ್ಯಕೀಯ ಅಧಿಕಾರಿ ಡಾ. ಅಬ್ದುಲ್ ಗಫೂರ್ ಅವರಿಗೆ ನಾಲ್ಕು ಬಾರಿ ಕೋವಿಡ್ ಪಾಸಿಟಿವ್ ಆಗಿತ್ತು. ಮೇ 2020 ರಲ್ಲಿ ಮೊದಲಬಾರಿಗೆ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಡಿಸೆಂಬರ್‌ನಲ್ಲಿ ಪತ್ತೆ ಪಾಸಿಟಿವ್ ಆಗಿತ್ತು. ಬಳಿಕ, ಈ ವರ್ಷ ಅವರು ಲಸಿಕೆ ಪಡೆದಿದ್ದರೂ ಸಹ ಏಪ್ರಿಲ್ ಮತ್ತು ಆಗಸ್ಟ್‌ನಲ್ಲಿ ಕೋವಿಡ್ ಆಗಿದೆ.

           ಡಾ. ಗಫೂರ್ ಅವರು ಕೇರಳದಲ್ಲಿ ಕೊರೊನಾ ಉತ್ತುಂಗಕ್ಕೇರಿರುವ ಈ ಸಮಯದಲ್ಲಿ ಕೋವಿಡ್ ವಾರ್ಡ್‌ಗಳಲ್ಲಿ ಧೃತಿಗೆಡದೆ ಕೆಲಸ ಮಾಡುತ್ತಿದ್ದಾರೆ. 4 ಬಾರಿ ಕೋವಿಡ್ ಪಾಸಿಟಿವ್ ಆಗಿದ್ದರೂ ತಮ್ಮ ಸೇವೆ ಮುಂದುವರಿಸುತ್ತಿದ್ದಾರೆ.

              ಮೊದಲ ಬಾರಿಗೆ ಅವರಿಗೆ ಕೋವಿಡ್ ಪಾಸಿಟಿವ್ ಆಗಿದ್ದಾಗ ಯಾವುದೇ ರೋಗಲಕ್ಷಣಗಳಿರಲಿಲ್ಲ. ನಂತರ ಮೂರು ಬಾರಿ ಅವರು ಜ್ವರ. ವಾಸನೆ ಗ್ರಹಿಸಲು ಸಾಧ್ಯವಾಗದಿರುವುದು ಮತ್ತು ರುಚಿಯ ನಷ್ಟದಂತಹ ಲಕ್ಷಣಗಳನ್ನು ಹೊಂದಿದ್ದರು. ಅವರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಅನುಭವಿಸದಿದ್ದರೂ, ಆಗಾಗ್ಗೆ ಕ್ವಾರಂಟೈನ್ ಆಗಬೇಕಾಗಿ ಬಂದಿದ್ದು ಅವರಿಗೆ ತೊಂದರೆಯಾಗಿತ್ತು.

             ವೈದ್ಯರಿಂದ ಸಂಗ್ರಹಿಸಿದ ಮಾದರಿಯನ್ನು ವಿಶ್ಲೇಷಣೆ ನಡೆಸಲು ಸಿಎಸ್‌ಐಆರ್ ಇನ್‌ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿಗೆ ಕಳುಹಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

            ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಸಮಖ್ಯೆಯಲ್ಲಿ ಸೋಂಕು ಹರಡುವಿಕೆ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಇತ್ತೀಚೆಗೆ ಜೀನೋಮ್ ಸೀಕ್ವೆನ್ಸಿಂಗ್ ಅಧ್ಯಯನ ನಡೆಸಲು ನಿರ್ಧರಿಸಿದೆ.

           ಡಾ. ಗಫೂರ್ ಅವರು ಸಹ ತಮಗೆ ಪದೇ ಪದೇ ಕೋವಿಡ್ ಪಾಸಿಟಿವ್ ಆಗುತ್ತಿರುವುದು ಏಕೆ ಎಂಬುದನ್ನು ತಿಳಿಯಲು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries