ಮುಂಬೈ: ಖ್ಯಾತ ವಿಡಿಯೋ ಸರ್ಚಿಂಗ್ ತಾಣ ಯೂಟ್ಯೂಬ್ ನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ತಿಂಗಳಿಗೆ 4 ಲಕ್ಷ ರೂ ಪಾವತಿ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದು, ಹರಿಯಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತಮ್ಮ ಕೋವಿಡ್ ಲಾಕ್ ಡೌನ್ ಅವಧಿಯ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೊರೋನಾ ಕಾಲದಲ್ಲಿ ಲಾಕ್‌ಡೌನ್ ಆದಾಗ ತಾವು ಮನೆಯಲ್ಲೇ ತಮ್ಮ ಸಮಯವನ್ನು ಕಳೆದಿದ್ದು ಹೇಗೆ ಎಂಬುದನ್ನು ತಿಳಿಸಿದ್ದಾರೆ.
'ಕೊರೋನಾ ಸಮಯದಲ್ಲಿ ನಾನು ಎರಡು ಕೆಲಸ ಮಾಡಿದೆ. ಮನೆಯಲ್ಲೇ ಅಡುಗೆ ಮಾಡುವುದನ್ನು ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲು ಆರಂಭಿಸಿದೆ. ಆನ್ ಲೈನ್‌ನಲ್ಲಿ ಬಹಳಷ್ಟು ಭಾಷಣ ಮಾಡಿದೆ. ಅದನ್ನು ಯೂಟ್ಯೂಬ್‌ಗೆ ಅಪ್ಲೋಡ್ ಮಾಡುತ್ತಿದ್ದೆವು. ಅದಕ್ಕೆ ವ್ಯಾಪಕವಾದ ಪ್ರೇಕ್ಷಕರು ಸಿಕ್ಕಿದ್ದು, ಈಗ ಯೂಟ್ಯೂಬ್ ನನಗೆ ತಿಂಗಳಿಗೆ 4 ಲಕ್ಷ ರೂಪಾಯಿ ಪಾವತಿಸುತ್ತದೆ ಎಂದು ಹೇಳಿದ್ದಾರೆ.
ಸ್ವಂತ ಮಾವನ ಮನೆಯನ್ನೇ ಕೆಡವಲು ಆದೇಶಿಸಿದ್ದೆ
ಇದೇ ವೇಳೆ ತಮ್ಮ ಹಿಂದಿನ ಒಂದು ಘಟನೆಯನ್ನು ನೆನಪಿಸಿಕೊಂಡ ಗಡ್ಕರಿ ಅವರು, ತಮ್ಮ ಪತ್ನಿಗೆ ಹೇಳದೆ ತನ್ನ ಮಾವನ ಮನೆಯನ್ನು ಕೆಡವಲು ಆದೇಶಿಸಿದನೆಂದು ಹೇಳಿದ್ದಾರೆ. ನಾನು ಹೊಸದಾಗಿ ಮದುವೆಯಾಗಿದ್ದೆ. ನನ್ನ ಮಾವ ಮನೆ ರಸ್ತೆ ಮಧ್ಯದಲ್ಲಿತ್ತು. ನನ್ನ ಹೆಂಡತಿಗೆ ಹೇಳದೆ ನಾನು ನನ್ನ ಮಾವನ ಮನೆಯನ್ನು ಕೆಡವಲು ಆದೇಶಿಸಿದ್ದೆ ಎಂದುದ್ದಾರೆ. ಅಲ್ಲಿ ಮನೆ ಇದೆ. ರಸ್ತೆ ನಿರ್ಮಿಸಲು ಅದನ್ನು ನೆಲಸಮ ಮಾಡಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಹೀಗಾಗಿ ನಾನು ಆ ಕೆಲಸ ಮಾಡಿದೆ ಎಂದು ಸಚಿವರು ಹೇಳಿದ್ದಾರೆ.
ಕಾಮಗಾರಿ ಪರಿಶೀಲನೆ
ಲೋಡ್ಕಿ ಗ್ರಾಮದಲ್ಲಿ ನಡೆಯುತ್ತಿರುವ ಯೋಜನೆಯ ಕೆಲಸದ ಸ್ಥಿತಿಯನ್ನು ಪರಿಶೀಲಿಸಿದ ಅವರು, ಬಳಿಕ ಮಾತನಾಡಿದ ಅವರು, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ, ಸುಮಾರು 95,000 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಮಾರ್ಚ್ 2023 ರ ವೇಳೆಗೆ ಪೂರ್ಣಗೊಳ್ಳಲಿದೆ. ಬಹುಪಾಲು ಕೆಲಸಗಳನ್ನು ಈಗಾಗಲೇ ಗುತ್ತಿಗೆದಾರರಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಹರಿಯಾಣದಲ್ಲಿ ಬರುವ ಹೆದ್ದಾರಿಯ ಸುಮಾರು 160 ಕಿಲೋಮೀಟರುಗಳ ಕೆಲಸವು ಮಾರ್ಚ್ 2022 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ದೆಹಲಿಯಿಂದ ರಾಜಸ್ಥಾನದ ದೌಸಾ ಮತ್ತು ವಡೋದರಾದಿಂದ ಅಂಕಲೇಶ್ವರದವರೆಗಿನ ರಸ್ತೆಯ ಒಂದು ಭಾಗವನ್ನು ಮಾರ್ಚ್ 2022 ಕ್ಕೆ ನಿರ್ಮಿಸಲಾಗುವುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಗುರುಗ್ರಾಮ್ ಲೋಕಸಭಾ ಸದಸ್ಯ ರಾವ್ ಇಂದರ್ಜಿತ್ ಸಿಂಗ್ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು.