ಕಾಸರಗೋಡು: ಕೋವಿಡ್ 19 ರೋಗ ಹೆಚ್ಚಳ ಹಿನ್ನೆಲೆಯಲ್ಲಿ ಪ್ರತಿವಾರದ ಸೋಂಕು ಜನಸಂಖ್ಯಾ ಗಣತಿ(ಡಬ್ಲ್ಯೂ.ಐ.ಪಿ.ಆರ್.) 10ಕ್ಕಿಂತ ಅಧಿಕವಿರುವ 4 ಸ್ಥಳೀಯಾಡಳಿತ ಸಂಸ್ಥೆ ಗಳ ವಾರ್ಡ್ ಗಳನ್ನು ಸೆ.28ರಿಂದ ಅ.4 ವರೆಗೆ ಕಂಟೈನ್ಮೆಂಟ್ ಝೋನ್ ಗಳಾಗಿ ಪರಿಶೀಲಿಸಿ, ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಆದೇಶ ಪ್ರಕಟಿಸಿದರು.
ಸೆ.20ರಿಂದ 26 ವರೆಗಿನ ಡಬ್ಲ್ಯೂ.ಐ.ಪಿ.ಆರ್. 10ಕ್ಕಿಂತ ಅಧಿಕ ವರದಿಯಾಗಿರುವ ಸ್ಥಳೀಯಾಡಳಿತ ಸಂಸ್ಥೇಗಳು, ವಾರ್ಡ್, ಡಬ್ಲ್ಯೂ.ಐ.ಪಿ.ಆರ್. ಈ ಕೆಳಗಿನಂತಿವೆ:
ಬಳಾಲ್: 11, 20.42, ಕಯ್ಯೂರು-ಚೀಮೇನಿ: 13,15:36
ಕೋಡೋಂ-ಬೇಳೂರು: 17,13.57
ಪುಲ್ಲೂರು-ಪೆರಿಯ: 15,10.98
ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳು
5 ಕ್ಕಿಂತ ಅಧಿಕ ಆಕ್ಟಿವ್ ಕೇಸುಗಳು ಒಂದು ಪ್ರದೇಶವನ್ನು ಕೇಂದ್ರೀಕರಿಸಿರುವ 5 ಪ್ರದೇಶಗಳನ್ನು ಅ.4 ವರೆಗೆ ಮೈಕ್ರೋ ಕಂಟೈನೆಂಟ್ ಝೋನ್ ಗಳಾಗಿಸಲಾಗಿದೆ.
ಚೆಂಗಳ: ವಾರ್ಡ್ 16-ಚೆರ್ಕಳ
ಮಡಿಕೈ: ವಾರ್ಡ್ 6-ಮಲಪ್ಪಚ್ಚೇರಿ
ಮುಳಿಯಾರು: ವಾರ್ಡ್ 5-ನೂವಂವಯಲ್
ಮುಳಿಯಾರು: ವಾರ್ಡ್ 7- ಕೋಟೂರು
ಪುಲ್ಲೂರು-ಪೆರಿಯ : ವಾರ್ಡ್ 4-ಅಲ್ಲರಂಡ