ಪೆರ್ಲ: ಪೆರ್ಲದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ನೇತೃತ್ವದ 50ನೇ ವರ್ಷದ ಶ್ರೀಗಣೇಶೋತ್ಸವ ಸೆ.10 ರಂದು ಶುಕ್ರವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ 7.30ಕ್ಕೆ ಗಣಪತಿ ಹೋಮ, 8ಕ್ಕೆ ಗಣಪತಿ ಪ್ರತಿಷ್ಠೆ, 8.50ಕ್ಕೆ ಧ್ವಜಾರೋಹಣ, 9 ರಿಂದ 10.30ರ ವರೆಗೆ ಶ್ರೀಮಹಾಲಿಂಗೇಶ್ವರ ಭಜನಾ ಸಂಘ ಬಜಕ್ಕೂಡ್ಲು ಹಾಗೂ 10.30 ರಿಂದ 12ರ ವರೆಗೆ ಶ್ರೀಸತ್ಯನಾರಾಯಣ ಭಜನಾ ಸಂಘ ಪೆರ್ಲ, 12 ರಿಂದ 1.30ರ ವರೆಗೆ ಶ್ರೀಅಯ್ಯಪ್ಪ ಸ್ವಾಮಿ ಭಜನಾ ಸಂಘ ಪೆರ್ಲ, 1.30 ರಿಂದ 3ರ ವರೆಗೆ ವಿಠಲ ಶೆಟ್ಟಿ ಮತ್ತು ಅಮೃತ ಬಳಗ ಪೆರ್ಲ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯಲಿದೆ. ಅಪರಾಹ್ನ 3ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಶ್ರೀಗಣಪತಿ ವಿಸರ್ಜನೆ ನಡೆಯಲಿದೆ.