ವಾಷಿಂಗ್ ಟನ್: ಕೋವಿಡ್-19 ಸೋಂಕಿನ ವಿರುದ್ಧ ರೋಗನಿರೋಧಕತೆ ಹೆಚ್ಚಿಸುವುದಕ್ಕಾಗಿ ನೀಡಲಾಗುತ್ತಿರುವ ಫೈಜರ್ ಲಸಿಕೆಯ ರೋಗನಿರೋಧಕ ಶಕ್ತಿ 6 ತಿಂಗಳಲ್ಲಿ ಶೇ.80 ರಷ್ಟು ಕುಸಿತ ಕಂಡಿರುವುದು ವರದಿಯಾಗಿದೆ.
ಅಮೆರಿಕದಲ್ಲಿನ ಸೀನಿಯರ್ ನರ್ಸಿಂಗ್ ಹೋಮ್ ನಿವಾಸಿಗಳು ಹಾಗೂ ಅವರ ಆರೈಕೆಯಲ್ಲಿ ತೊಡಗಿರುವವರು ಎರಡನೇ ಡೋಸ್ ಲಸಿಕೆ ಪಡೆದು 6 ತಿಂಗಳಾದ ನಂತರ ಲಸಿಕೆಯ ಶೇ.80 ರಷ್ಟು ರೋಗನಿರೋಧಕತೆ ಕಡಿಮೆಯಾಗಿದೆ ಎಂಬುದು ಅಲ್ಲಿನ ಅಧ್ಯಯನ ವರದಿಯಿಂದ ತಿಳಿದುಬಂದಿದೆ.
ಕೇಸ್ ವೆಸ್ಟ್ರನ್ ರಿಸರ್ವ್ ಯೂನಿವರ್ಸಿಟಿ ಹಾಗೂ ಬ್ರೌನ್ ಯೂನಿವರ್ಸಿಡಿಯಿಂದ ನಡೆದ ಅಧ್ಯಯನಕ್ಕಾಗಿ 120 ನರ್ಸಿಂಗ್ ಹೊಮ್ ನಿವಾಸಿಗಳ ಹಾಗೂ 92 ಆರೋಗ್ಯ ಕೇರ್ ಕಾರ್ಯಕರ್ತರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು ವರದಿ ಪ್ರಕಟಿಸಲಾಗಿದೆ.
ಪ್ರತಿಕಾಯಗಳ ರಚನೆಯ ಮೂಲಕ ಸೃಷ್ಟಿಯಾದ ಕೋವಿಡ್-19 ರೋಗ ನಿರೋಧಕ ಶಕ್ತಿಯ ಬಗ್ಗೆ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಕೋವಿಡ್-19 ಎದುರಿಸಿದ ನಂತರ ಲಸಿಕೆ ಪಡೆದವರಲ್ಲಿ ಎರಡು ವಾರಗಳಲ್ಲಿಯೇ ರೋಗನಿರೋಧಕ ಶಕ್ತಿ ಕುಸಿತ ವರದಿಯಾಗಿದೆ.
ಇನ್ನಷ್ಟೇ ಪ್ರಕಟವಾಗಬೇಕಿರುವ ವರದಿಯಲ್ಲಿ ಎರಡನೇ ಡೋಸ್ ಫೈಜರ್ ಲಸಿಕೆಯ ರೋಗನಿರೋಧಕ ಶಕ್ತಿ 6 ತಿಂಗಳಲ್ಲಿ ಶೇ.80 ರಷ್ಟು ಕುಸಿತ ಕಂಡಿದೆ, ಹಿರಿಯ ನಾಗರೈಕರಲ್ಲೂ ಈ ಅಂಶಗಳು ಸಮನಾಗಿ ವರದಿಯಾಗಿದೆ ಎನ್ನುತ್ತಾರೆ ಸಂಶೋಧಕರು.