HEALTH TIPS

ಎಡನೀರು ಶ್ರೀಗಳ ಪ್ರಥಮ ಚಾತುರ್ಮಾಸ್ಯ ಸಂಪನ್ನ: ಪರಸ್ಪರ ನೆರವಿನೊಂದಿಗೆ ಧರ್ಮ ಗಟ್ಟಿಗೊಳಿಸಲು ಸಾಧ್ಯ: ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ: ಒಡಿಯೂರು ಶ್ರೀಗಳಿಗೆ 60ರ ಅಭಿನಂದನೆ

   

                ಕಾಸರಗೋಡು: ಪ್ರಥಮ ಚಾತುರ್ಮಾಸ್ಯ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿದೆ. ಆಚಾರಗಳು ಬೇರೆಬೇರೆಯಾಗಿದ್ದರೂ, ಯಾವುದೇ ತಾರಮ್ಯಗಳಿಲ್ಲದೆ ಯತಿವರ್ಯರ ಪರಸ್ಪÀರ ನೆರವಿನೊಂದಿಗೆ ಸನಾತನ ಧರ್ಮವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯವಿದೆ ಎಂದು ಶ್ರೀಮದ್ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.

                ಶ್ರೀಗಳ ಪ್ರಥಮ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ಸಂಜೆ ಶ್ರೀಮಠದಲ್ಲಿ ನಡೆದ ಚಾತುರ್ಮಾಸ್ಯ ಸಮಾರೋಪದ ಧಾರ್ಮಿಕ ವಿದ್ವತ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದು ಅವರು ಮಾತನಾಡಿದರು.


            ಎಡನೀರು ಮಠದ ಮೂಲಕ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಹಾಗೂ ಸಾಮಾಜಿಕ ಸುದೃಢತೆಗೆ ಎಲ್ಲರೊಂದಿಗೆ ಒಂದಾಗಿ ಮಠ ಮುನ್ನಡೆಯಲಿದೆ ಎಂದವರು ತಿಳಿಸಿದರು.

               ವೇದಿಕೆಯಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದ ಕಾಸರಗೋಡು ಚಿನ್ಮಯ ಮಿಷನ್ ನ ಶ್ರೀವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ಸನಾತನ ಧರ್ಮ ಕೇವಲ ಜೀವನ ಪಥವಷ್ಟೇ ಆಗಿರದೆ ಅದು ಜೀವನ ದೃಷ್ಟಿಯೂ ಆಗಿದೆ ಎಂದು ತಿಳಿಸಿದರು. 

                  ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಮಾತನಾಡಿ ಧಾರ್ಮಿಕ, ವೈದಿಕದ ಜೊತೆಗೆ ಸಾಂಸ್ಕøತಿಕ ಕೇಂದ್ರವಾಗಿ ಶ್ರೀಮಠ ಕರಾವಳಿ ಪ್ರದೇಶದ ಹೆಮ್ಮೆಯ ಶ್ರದ್ದಾ ಕೇಂದ್ರವಾಗಿ ಶಕ್ತಿಕೇಂದ್ರವಾಗಿದೆ ಎಂದರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ,ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ, ಕಾಞಂಗಾಡ್ ಆನಂದಾಶ್ರಮದ ಶ್ರೀಮುಕ್ತಾನಂದ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. 

                   ಈ ಸಂದರ್ಭ ಒಡಿಯೂರು ಶ್ರೀಗಳಿಗೆ 60ರ ಅಭಿನಂದನೆ ನಡೆಯಿತು. ಚಾತುರ್ಮಾಸ್ಯ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಶಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. 

                ಶ್ರೀಮಠದ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ಚಾತುರ್ಮಾಸ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ವಂದಿಸಿದರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಒಡಿಯೂರು ಶ್ರೀಗಳ ಅಭಿನಂದನಾ ಭಾಷಣ ಮಾಡಿದರು. ಕೆಯ್ಯೂರು ನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries