HEALTH TIPS

ಗುರು ಗ್ರಹದಲ್ಲಿ ಭೀಕರ ಚಂಡಮಾರುತ ಸ್ಫೋಟ..! ಗಂಟೆಗೆ 600 ಕಿ.ಮೀ. ವೇಗ..!

               ಬ್ರಹ್ಮಾಂಡವೇ ಅಚ್ಚರಿಗಳ ಸರಮಾಲೆ, ಬಾಹ್ಯಾಕಾಶದಲ್ಲಿ ಇಣುಕಿ ನೋಡಿದಷ್ಟು ಮಾನವನ ಭವಿಷ್ಯ ಮತ್ತಷ್ಟು ಉಜ್ವಲವಾಗುತ್ತಿದೆ. ಅದರಲ್ಲೂ ನಮ್ಮ ಸೌರಮಂಡಲ ಅಚ್ಚರಿಗಳ ಮೂಟೆಯನ್ನೇ ಹೊತ್ತುಕೊಂಡಿದೆ. ಅಷ್ಟಕ್ಕೂ ಯಾಕಪ್ಪಾ ಈ ಪೀಠಿಕೆ ಅಂದ್ರೆ, ನಮ್ಮ ಗುರು ಗ್ರಹ ಗೊತ್ತಲ್ವಾ..? ಆ ಗುರು ಗ್ರಹದಲ್ಲಿ ಅಚ್ಚರಿಯ ಬೆಳವಣಿಗೆ ಕಂಡುಬಂದಿದೆ. ಹೌದು, ಸೌರಮಂಡಲ ಅಂದ್ರೆ ನಮ್ಮ ಸೂರ್ಯನ ಕುಟುಂಬದಲ್ಲಿ ಸೂರ್ಯನನ್ನ ಬಿಟ್ಟರೆ ಈ ಗುರು ಗ್ರಹವೇ ದೊಡ್ಡದು.


              ಸಾವಿರಾರು ಭೂಮಿಗಳನ್ನ ಗುರು ಗ್ರಹದ ಒಳಗೆ ಮುಚ್ಚಿಡುವಷ್ಟು ದೊಡ್ಡದಾಗಿ ಇದೆ ಗುರು ಗ್ರಹ. ಇಂತಹ ಬೃಹತ್ ಗ್ರಹದಲ್ಲಿ ಒಂದು ವಿಸ್ಮಯಕಾರಿ ಜಾಗವಿದೆ, ಅದೇ 'ದಿ ಗ್ರೇಟ್ ರೆಡ್ ಸ್ಪಾಟ್' ಅಂತಾ. ಈಗ 'ನಾಸಾ' ಸಂಸ್ಥೆಯ ಹಬಲ್ ಟೆಲಿಸ್ಕೋಪ್ ಗುರು ಗ್ರಹದ 'ದಿ ಗ್ರೇಟ್ ರೆಡ್ ಸ್ಪಾಟ್' ಕುರಿತು ಮಹತ್ವದ ಮಾಹಿತಿ ಹೊರಹಾಕಿದೆ.

                  ಅಂದಹಾಗೆ 'ಗ್ರೇಟ್ ರೆಡ್ ಸ್ಪಾಟ್'ನ ವೇಗ ಈ ಹಿಂದೆ ಸುಮಾರು 400 ಕಿಲೋ ಮೀಟರ್ ಇತ್ತು, ಆದರೆ ದಿಢೀರ್ ಅದರ ವೇಗ 600 ಕಿಲೋ ಮೀಟರ್‌ನ ದಾಟಿದೆಯಂತೆ. ಹೀಗಾಗಿ ಗುರು ಗ್ರಹದಲ್ಲಿ ಬಹುದೊಡ್ಡ ಬದಲಾವಣೆ ನಡೆಯಬಹುದು ಅಂತಾ ವಿಜ್ಞಾನಿಗಳು ನಿರೀಕ್ಷಿಸುತ್ತಿದ್ದಾರೆ.


                    'ರೆಡ್ ಸ್ಪಾಟ್' ಎಂಬ ಅಚ್ಚರಿ

                'ದಿ ಗ್ರೇಟ್ ರೆಡ್ ಸ್ಪಾಟ್' ಸುತ್ತಳತೆ ಬರೋಬ್ಬರಿ 16 ಸಾವಿರ ಕಿಲೋ ಮೀಟರ್. ಹೌದು, ನಮ್ಮ ಲೆಕ್ಕದಲ್ಲಿ ಸುಮಾರು 3 ಭೂಮಿಗಳನ್ನ ಈ ಚಂಡಮಾರುತದ ಒಳಗೆ ಸುಲಭವಾಗಿ ತಳ್ಳಿಬಿಡಬಹುದು ಎಂದರೆ ಚಿಂತಿಸಿ. ಭೂಮಿಯಲ್ಲಿ ಚಂಡಮಾರುತ ಬೀಸುವ ರೀತಿ ಗುರು ಗ್ರಹದ ಮೇಲೂ ರಾಕ್ಷಸ ಗಾಳಿ ಬೀಸುತ್ತಲಿದೆ. ಈ ಪೈಕಿ 'ದಿ ಗ್ರೇಟ್ ರೆಡ್ ಸ್ಪಾಟ್' ಭಾಗದಲ್ಲಿ ಭಾರಿ ಪ್ರಮಾಣದ ಚಂಡಮಾರುತ ಬೀಸುತ್ತಿದೆ. ಮಾರುತಗಳ ನಡುವೆ ಘರ್ಷಣೆ ಸಂಭವಿಸಿ ಗುರು ಗ್ರಹದ ಮೇಲೆ ಬೆಂಕಿ ಹೊತ್ತುತ್ತಿದೆ. ಮತ್ತೊಂದು ಕಡೆ ಕ್ಷುದ್ರಗ್ರಹ ಅಪ್ಪಳಿಸಿದ ಬಳಿಕ ಗುರು ಗ್ರಹದಲ್ಲಿ ಹೈಡ್ರೋಜನ್ ಸೈನೈಡ್ ಸೇರಿದಂತೆ ವಿವಿಧ ಅನಿಲಗಳು ಉದ್ಭವವಾಗಿವೆ. ಈ ಗ್ಯಾಸ್ ಗ್ರಹದ ಸುತ್ತಲೂ ಸಂಚರಿಸಿ ಹೊಸ ಪ್ರಕ್ರಿಯೆ ಶುರುಮಾಡಿದೆ ಎನ್ನಲಾಗುತ್ತಿದೆ. ಇಷ್ಟೆಲ್ಲದರ ನಡುವೆ ಭವಿಷ್ಯದಲ್ಲಿ ಗುರು ಭೂಮಿಗೆ ಮತ್ತೊಂದು ಸೂರ್ಯ ಆಗಬಹುದಾ ಎಂಬ ಪ್ರಶ್ನೆಗೂ ಉತ್ತರವನ್ನ ಹುಡುಕಲಾಗುತ್ತಿದೆ. ಏಕೆಂದರೆ ಬೃಹತ್ ಅನಿಲದ ಮೂಟೆಯಂತಿರುವ ಗುರು ಗ್ರಹ ಸೂರ್ಯನ ಆರಂಭಿಕ ಅವಧಿಯನ್ನೇ ಹೋಲುತ್ತಿದೆ.

                       ಗೆಲಿಲಿಯೋ ಮಾಡಿದ ಸಾಧನೆ ಇದು..!

              ಇಂದಿಗೆ ಮಾನವ ಗುರು ಗ್ರಹದ ಬಗ್ಗೆ ಇಷ್ಟೆಲ್ಲಾ ಜ್ಞಾನ ಹೊಂದಲು ಅಡಿಪಾಯ ಹಾಕಿಕೊಟ್ಟಿದ್ದೇ ಗೆಲಿಲಿಯೋ. 17ನೇ ಶತಮಾನದಲ್ಲಿ ಗೆಲಿಲಿಯೋ ಇಡೀ ಸಮಾಜವನ್ನೇ ಎದುರು ಹಾಕಿಕೊಂಡು ಬಾಹ್ಯಾಕಾಶ ವಿಜ್ಞಾನವನ್ನು ಬೆಳೆಸಿದ್ದರು. ಈ ಪೈಕಿ ಗೆಲಿಲಿಯೋಗೆ ಗುರು ಗ್ರಹ ಕಂಡರೆ ಅದೇನೋ ಪ್ರೀತಿ. ಗುರು ಗ್ರಹದ ಚಂದ್ರರ ಕುರಿತು ಅಧ್ಯಯನ ನಡೆಸಿದ್ದ ಮೊದಲಿಗ ಎಂದರೆ ಗೆಲಿಲಿಯೋ. ಹೀಗೆ ಗುರು ಗ್ರಹದಲ್ಲಿ ರಾಸಾಯನಿಕ ಪ್ರಕ್ರಿಯೆಗಳನ್ನು ಗಮನಿಸಿದ್ದ ಗೆಲಿಲಿಯೋ ಹಲವು ಅಂಶವನ್ನ ಕಂಡುಕೊಂಡಿದ್ದ. ಅಲ್ಲಿಂದ ಈವರೆಗೆ ಸುಮಾರು 400 ವರ್ಷಗಳ ಸುದೀರ್ಘ ಅಧ್ಯಯನದಿಂದ ನಮಗೆ ಗುರು ಗ್ರಹ ಒಂದು ಅಚ್ಚರಿ ಆಗಿ ಉಳಿದುಬಿಟ್ಟಿದೆ. ಭವಿಷ್ಯದಲ್ಲಿ ಈ ಗ್ರಹ ಭೂಮಿಗೆ ಬೆಳಕು ನೀಡಿದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.

                         ಗುರು ಗ್ರಹವೇ ಒಂದು ಅಚ್ಚರಿ..!

              ಹೌದು, ಇಡೀ ಸೌಮಂಡದಲ್ಲಿ ಗುರು ಗ್ರಹ ಒಂದು ಅಚ್ಚರಿ. ಏಕೆಂದರೆ ಇತರ ಎಲ್ಲಾ ಗ್ರಹಗಳಿಗಿಂತ ಗುರು ಅತ್ಯಂತ ದೊಡ್ಡ ಗ್ರಹ. ಕೆಲ ವಿಚಾರಗಳಲ್ಲಿ ಸೂರ್ಯನಿಗೂ ಸೆಡ್ಡು ಹೊಡೆಯುವ ತಾಕತ್ತು ಗುರು ಗ್ರಹಕ್ಕಿದೆ. ಅಷ್ಟೇ ಅಲ್ಲ, ಗುರು ಗ್ರಹದೊಳಗೆ ನಡೆಯುತ್ತಿರುವ ಆಂತರಿಕ ಕ್ರಿಯೆಗಳು ನಕ್ಷತ್ರಗಳ ಕ್ರಿಯೆಗೆ ಹೋಲುತ್ತದೆ ಎಂಬ ಅನುಮಾನ ಕೂಡ ಇದೆ. ಈ ಅನುಮಾನಗಳಿಗೆ ವಿಜ್ಞಾನಿಗಳು ಬಲವಾದ ಕಾರಣವನ್ನೂ ನೀಡುತ್ತಾರೆ. ಗುರು ಗ್ರಹದಲ್ಲಿ ಅನಿಲಗಳ ಸಂಯೋಜನೆ ಇದೆ, ನಕ್ಷತ್ರದಲ್ಲೂ ಇದೇ ರೀತಿಯ ವಸ್ತುಗಳು ಅಡಗಿರುತ್ತವೆ. ಹೀಗಾಗಿ ಮುಂದೊಂದು ದಿನ ಸೂರ್ಯನ ನಂತರ ಗುರು ಗ್ರಹವೇ ನಮಗೆಲ್ಲಾ ಸೂರ್ಯನ ಸ್ಥಾನ ಪಡೆದರೂ ಅಚ್ಚರಿ ಪಡಬೇಕಿಲ್ಲ.

                            ಊಹೆಗೆ ನಿಲುಕದಷ್ಟು ಶಾಖ ಬಿಡುಗಡೆ

             ನಕ್ಷತ್ರಗಳು ಮೊದಲಿಗೆ ಸಾಮಾನ್ಯ ಮೋಡ ಅಥವಾ ಅನಿಲ ಗ್ರಹದಂತೆ ಗೋಚರಿಸಿದರೂ ಅಲ್ಲಿ ಬಿಸಿ ಹೆಚ್ಚಾಗಿ ಬೈಜಿಕ ಸಮ್ಮಿಲನ (Nuclear Fusion)ಆರಂಭವಾಗುತ್ತದೆ. ಇದನ್ನು ಸಾಮಾನ್ಯವಾಗಿ ಹೇಳುವುದಾದರೆ ಭೂಮಿ ವಿನಾಶಕ್ಕೆ ಮನುಷ್ಯ ಕಂಡುಹಿಡಿದ ಅಣುಬಾಂಬ್ ಅಥವಾ ನ್ಯೂಕ್ಲಿಯರ್ ವೆಪನ್ಸ್ ಇದೇ ಮಾದರಿಯನ್ನ ಅನುಸರಿಸುತ್ತವೆ. ಆದರೆ ಮಾನವನ ಬಾಂಬ್ ಬೈಜಿಕ ವಿದಳನ ಕ್ರಿಯೆಯಿಂದ ಆಗುತ್ತದೆ. ಆದರೆ ನಕ್ಷತ್ರಗಳಲ್ಲಿ ಬೈಜಿಕ ಸಮ್ಮಿಲನ ಕ್ರಿಯೆ ಮೂಲಕ ಅಪಾರ ಪ್ರಮಾಣದಲ್ಲಿ ಶಾಖ ಹಾಗೂ ಶಕ್ತಿ ಬಿಡುಗಡೆಯಾಗುತ್ತದೆ. ಇದೇ ಪ್ರಕ್ರಿಯೆ ಮುಂದೆ ನಕ್ಷತ್ರ ರೂಪಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹೈಡ್ರೋಜನ್ (H1) + ಹೈಡ್ರೋಜನ್ (H1) ಒಂದುಗೂಡಿ ಹೀಲಿಯಂ (H2) ಆಗುತ್ತದೆ. ಮುಂದೆ ಹೀಲಿಯಂ (H2) + ಹೀಲಿಯಂ (H2) ಒಂದುಗೂಡಿ ಬೆರಿಲಿಯಂ (Be4) ಆಗುತ್ತದೆ. ನಕ್ಷತ್ರಗಳ ಬೈಜಿಕ ಸಮ್ಮಿಲನ 1+1ರ ಸೂತ್ರ ಆಧರಿಸಿರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries