HEALTH TIPS

ಕಳೆದ ವಾರ ಭಾರತದ ಶೇ.68 ರಷ್ಟು ಕೋವಿಡ್-19 ಪ್ರಕರಣ ವರದಿಯಾಗಿದ್ದು ಕೇರಳದಿಂದ!

                 ನವದೆಹಲಿಭಾರತದಲ್ಲಿ ಕೋವಿಡ್-19 ಪ್ರಕರಣಗಳು ಅತಿ ಹೆಚ್ಚಾಗಿರುವ ರಾಜ್ಯಗಳ ಪೈಕಿ ಕೇರಳ ಮುಂಚೂಣಿಯಲ್ಲಿದೆ. ಕಳೆದ ವಾರ ಭಾರತದಲ್ಲಿ ಒಟ್ಟು ವರದಿಯಾದ ಪ್ರಕರಣಗಳಲ್ಲಿ ಶೇ.68 ರಷ್ಟು ಕೇರಳದಿಂದ ವರದಿಯಾಗಿದೆ.

             ಕಳೆದ 24 ಗಂಟೆಳಲ್ಲಿ 43,263 ಪ್ರಕರಣಗಳು ದೇಶಾದ್ಯಂತ ವರದಿಯಾಗಿದ್ದರೆ ಈ ಪೈಕಿ 32,000 ಪ್ರಕರಣಗಳು ಕೇರಳದಲ್ಲಿ ವರದಿಯಾಗಿದೆ.

              ಕಳೆದ ವಾರ ಭಾರತದಲ್ಲಿ ವರದಿಯಾದ ಒಟ್ಟಾರೆ ಪ್ರಕರಣಗಳ ಪೈಕಿ ಶೇ.68 ರಷ್ಟು ಕೇರಳದಿಂದ ವರದಿಯಾಗಿತ್ತು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

               ಭಾರತದಲ್ಲಿ ಒಟ್ಟಾರೆ ಕೋವಿಡ್-19 ಪ್ರಕರಣಗಳು ಇಳಿಕೆಯಾಗುತ್ತಿದ್ದು ಇಳಿಕೆಯ ಟ್ರೆಂಡ್ ಮೊದಲ ಅಲೆಯಲ್ಲಿದ್ದ ಟ್ರೆಂಡ್ ನ ಶೇ.50 ಕ್ಕಿಂತ ಕಡಿಮೆ ಇದೆ. ಭಾರತದಲ್ಲಿ 2 ನೇ ಅಲೆ ಇನ್ನೂ ಇದ್ದು ಮುಕ್ತಾಯಗೊಂಡಿಲ್ಲ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries