HEALTH TIPS

6 ವರ್ಷಗಳ ಕಾಯುವಿಕೆಗೆ ಲಭಿಸಿದ ಫಲ: ಚಂದ್ರಾವತಿ ಅವರಿಗೆ ಒಲಿದ ಭೂಹಕ್ಕು ಪತ್ರ ಲಭ್ಯತೆಯ ಭಾಗ್ಯ

   

                ಬದಿಯಡ್ಕ: ಚಂದ್ರಾವತಿ ಮತ್ತು ಅವರ ಪುತ್ರನಿಗೆ ಈಗ ಸಮಾದಾನದ ನಿಟ್ಟುಸಿರಿ ಬದುಕುವ ಭರವಸೆ ಮೂಡಿಬಂದಿದೆ.  ಒಂದು ಸೆಂಟ್ಸ್ ಜಾಗ ಕೂಡ ಸ್ವಂತದ್ದಾಗಿ ಇಲ್ಲದೆ ಬಳಲುತ್ತಿದ್ದ ಕುಂಬ್ಡಾಜೆ ಗ್ರಾಮ ಪಂಚಾಯತಿಯ  6 ನೇ ವಾರ್ಡ್ ಕಜೆ ನಿವಾಸಿ ಚಂದ್ರಾವತಿ ಮತ್ತು ಪುತ್ರನಿಗೆ ಈ ಸೌಭಾಗ್ಯ ಒದಗಿ ಬಂದಿದೆ.

              ಸೆ.14ರಂದು ನಡೆಯುವ ಭೂಹಕ್ಕು ಪತ್ರ ವಿತರಣೆ ಮೇಳದಲ್ಲಿ ಅವರಿಗೆ ಭೂಹಕ್ಕು ಪತ್ರ ದೊರೆಯಲಿದೆ. ಪರಿಶಿಷ್ಟ ಜಾತಿಗೆ ಸೇರಿದ ಅವರು ಸತತ 6 ವರ್ಷಗಳಿಂದ ಈ ಸೌಲಭ್ಯಕ್ಕಾಗಿ ಕಾಯುತ್ತಿದ್ದರು. ಕಜೆಯ ಕಾಲನಿಯ 18 ಸೆಂಟ್ಸ್ ಜಾಗದಲ್ಲಿ ಅವರು ವಸತಿ ಹೂಡಿದ್ದರು. 

             ಪುತ್ರ ಜನಿಸಿ 2 ವರ್ಷಗಳಾಗಬೇಕಿದ್ದರೆ ಪತಿ ಇವರನ್ನು ತೊರೆದು ಹೋಗಿದ್ದರು. ಇವರೊಬ್ಬರು ದುಡಿದು ತರುವ ಸಂಪಾದನೆಯಲ್ಲಿ ಇವರ ಮನೆ ಮತ್ತು ನೆರೆಮನೆಯಲ್ಲಿರುವ ಇವರ ವೃದ್ಧೆ ತಾಯಿ, ರೋಗಗ್ರಸ್ತೆ ತಂಗಿ ಬದುಕಬೇಕಿದೆ. ದೈನಂದಿನ ಹೊಟ್ಟೆಹೊರೆಗಾಗಿ ತ್ರಾಸಪಡುವ ಸಂದರ್ಭದಲ್ಲಿ ಭೂಹಕ್ಕು ಪತ್ರ ಲಭ್ಯವಾಗುತ್ತಿರುವುದು ಇವರಿಗೊಂದು ಸಾಂತ್ವನವಾಗಿದೆ. 4 ನೇ ತರಗತಿಯಲ್ಲಿ ಕಲಿಕೆ ನಡೆಸುತ್ತಿರುವ ಇವರ ಪುತ್ರ ಅಭಿಲಾಷ್ ಅವರಿಗೆ ತಾನು ಕಲಿತು ಬ್ಯಾಂಕ್ ಸಿಬ್ಬಂದಿಯಾಗಬೇಕೆಂಬ ಕನಸಿದ್ದು, ಸ್ವಂತದ್ದೊಂದು ಮನೆ ನಿರ್ಮಿಸಲು ಭೂಮಿ ಲಭ್ಯವಾಗುವುದರೊಂದಿಗೆ ಬಾಲಕನ ಉತ್ಸಾಹ ನೂರ್ಮಡಿಯಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries